×
Ad

ಬೆಳ್ತಂಗಡಿ: ಬೈಕ್ ಡಿಕ್ಕಿ - ವಿದ್ಯಾರ್ಥಿಗೆ ಗಾಯ

Update: 2016-08-22 19:49 IST

ಬೆಳ್ತಂಗಡಿ: ಬೆಳ್ತಂಗಡಿ ಹಳೆಕೋಟೆ ಪೆಟ್ರೋಲ್ ಬಂಕ್ ಬಳಿ ಶಾಲೆಯಿಂದ ನಡೆದುಕೊಂಡು ಮನೆಗೆ ಹೋಗುತಿದ್ದ ಮೇಲಂತಬೆಟ್ಟು ಕೆಲ್ಲಕೆರೆ ನಿವಾಸಿ, ವಿದ್ಯಾರ್ಥಿ ಪ್ರವೀಣ್(15)ಗೆ ಅಪರಿಚಿತ ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಪ್ರವೀಣನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News