×
Ad

ಅಡ್ಕರೆಪಡ್ಪುವಿನಲ್ಲಿ ಕೊಣಾಜೆ ಕ್ಲಸ್ಟ್ಟರ್ ಮಟ್ಟದ ಪ್ರತಿಭಾ ಕಾರಂಜಿ

Update: 2016-08-22 20:14 IST

ಕೊಣಾಜೆ,ಆ.22: ದ.ಕಜಿಲ್ಲಾ ಪಂಚಾಯತ್ , ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್‌ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ,ಜಮಿಯ್ಯತುಲ್ ಫಲಾಹ್‌ಉಡುಪಿ ಮತ್ತುದ.ಕಜಿಲ್ಲೆಅನುದಾನಿತಗ್ರೀನ್ ವೀವ್ ಹಿರಿಯ ಪ್ರಾಥಮಿಕ ಶಾಲೆಅಡ್ಕರೆ ಪಡ್ಪುಕೊಣಾಜೆ ಮಂಗಳೂರು ಇದರಜಂಟಿಆಶ್ರಯದಲ್ಲಿಕೊಣಾಜೆಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಕಾರ್ಯಕ್ರಮಇತ್ತೀಚೆಗೆನಡೆಯಿತು .

ಉದ್ಘಾಟನಾ ಸಮಾರಂಭದಅಧ್ಯಕ್ಷತೆಯುನ್ನುಕೊಣಾಜೆಗ್ರಾಮ ಪಂಚಾಯತ್ ಸದಸ್ಯರಾದಅಬ್ದುಲ್‌ಖಾದರ್‌ರವರು ವಹಿಸಿದ್ದರು.ಶಾಲಾ ಸಂಚಾಲಕರಾದ ಹಾಜಿಇಬ್ರಾಹಿಂಕೊಡಿಜಾಲ್‌ರವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದಅಧ್ಯಕ್ಷರಾದರಾಧಾಕೃಷ್ಣರಾವ್ ಪ್ರಾಸ್ಥಾವಿಕವಾಗಿ ಮಾತನಾಡಿದರು.ಕೊಣಾಜೆಸಿ.ಆರ್.ಪಿ ಸುಗುಣರವರು ಸ್ವಾಗತ ಮಾಡಿದರು ಹಾಗೂ ಶಾಲಾ ಮುಖ್ಯ ಶಿಕ್ಷಕಿಯಾದ ಎವ್ಲಿನ್ .ಪಿ. ಐಮನ್‌ರವರುಧನ್ಯವಾದಸಮರ್ಪಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಿಯತ್ತುಲ್ ಪಲಾಹ್‌ ದ.ಕ ಹಾಗೂ ಉಡುಪಿ ಜಿಲ್ಲಾಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್‌ಕೆ.ಕೆ ಇವರು ವಹಿಸಿದ್ದರು. ವೇದಿಕೆಯಲ್ಲಿ ಮುಹಿಯುದ್ದೀನ್‌ ಜುಮಾ ಮಸೀದಿ ಅಧ್ಯಕ್ಷರಾದ ಆದಂ ಮುಸ್ಲಿಯಾರ್, ಅಹಮದ್‌ ಅಬ್ಬಾಸ್ ಪ್ರಾಂಶುಪಾಲರಾದ ಅಬೂಬಕ್ಕರ್, ಅಹಮದ್‌ಕುಂಞಿ ಮಾಸ್ಟರ್, ಪ್ರೌಢ ಶಾಲೆಯ ಮುಖ್ಯೋಪಾದ್ಯಯರಾದ ಆಗ್ನೇಸ್ ಸೋಜ.ಪಿ, ಅಲ್‌ಇಹ್ಸಾನ್‌ಯೂತ್ ಅಸೋಶಿಯೇಸನ್ ಅಧ್ಯಕ್ಷರಾದ ನಿಯಾರ್, ಬೆಳ್ಮ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಸತ್ತಾರ್, ಹನೀಫ್, ಹಸೈನಾರ್, ಉಸ್ಮಾನ್ , ಮುಸ್ತಾಪಾಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News