×
Ad

ವೆನ್ಲಾಕ್ ಆಸ್ವತ್ರೆಯಲ್ಲಿ ಸಂಯೋಜಿತ ಆಯುಷ್ ಪದ್ಧತಿ ಚಿಕಿತ್ಸಾ ಸೌಲಭ್ಯ

Update: 2016-08-22 20:21 IST

ಮೂಡುಬಿದಿರೆ,ಆ.22: ಆಳ್ವಾಸ್ ಹೋಮಿಯೋಪಥಿ ಕಾಲೇಜಿನ 2016-17 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸೇರ್ಪಡೆ ಮತ್ತು ಪಾಲಕರ ಸಭೆ ಸೋಮವಾರ ಮಿಜಾರಿನ ಕ್ಯಾಂಪಸ್‌ನಲ್ಲಿ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಇಕ್ಬಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವೆನ್ಲಾಕ್ ಆಸ್ವತ್ರೆಯಲ್ಲಿ ದೇಶದ ಪ್ರಪ್ರಥಮ ಸಂಯೋಜಿತ ಆಯುಷ್ ಪದ್ಥತಿಗಳ ಚಿಕಿತ್ಸಾ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಹೇಳಿದರು. ಆಳ್ವಾಸ್ ಹೋಮಿಯೋಪಥಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದಾಗಿ ಭರವಸೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸಂಸ್ಥೆಯ ಬಗ್ಗೆ ಮಾತನಾಡಿದರು.

ಪ್ರಾಂಶುಪಾಲರು ಡಾ.ಪ್ರವೀಣ್ ರಾಜ್.ಪಿ ವೇದಿಕೆಯಲ್ಲಿದ್ದರು. ಡಾ.ಪ್ರಜ್ಞಾ ಆಳ್ವ ಸ್ವಾಗತಿಸಿದರು. ಡಾ.ಶಿಲ್ಪಿ ರಸ್ತೊಗಿ ವಂದಿಸಿದರು. ತಷ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News