ಅನಿಲ ಬೆಲೆ ನಿಗದಿ: ಎಫ್‌ಐಆರ್ ದಾಖಲಿಸಲು ಆಪ್ ಸರಕಾರಕ್ಕೆ ಅಧಿಕಾರವಿಲ್ಲ- ರಿಲಯನ್ಸ್ ವಾದ

Update: 2016-08-22 14:58 GMT

ಹೊಸದಿಲ್ಲಿ,ಆ.22: ಕೆಜಿ 6 ಬೇಸಿನ್‌ನಿಂದ ಉತ್ಪಾದನೆಯಾಗುತ್ತಿರುವ ಅನಿಲದ ಬೆಲೆಯನ್ನು ಹೆಚ್ಚಿಸುವಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸೋಮವಾರ ಕೋರಿಕೊಂಡ ರಿಲಾಯನ್ಸ್ ಇಂಡಸ್ಟ್ರೀಸ್,ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಲು ದಿಲ್ಲಿಯ ಆಪ್ ಸರಕಾರಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಪ್ರತಿಪಾದಿಸಿತು.

ದಿಲ್ಲಿ ಸರಕಾರದ ಭ್ರಷ್ಟಾಚಾರ ನಿಗ್ರಹ ಶಾಖೆ(ಎಸಿಬಿ)ಯು 2014ರಲ್ಲಿ ತನ್ನ ವಿರುದ್ಧ ದಾಖಲಿಸಿರುವ ಎಫ್ ಐಆರ್ ರದ್ದತಿಯನ್ನು ಕೋರಿದ ಅದು,ಇಂತಹ ವಿಷಯಗಳ ತನಿಖೆಗಳನ್ನು ನಡೆಸುವ ಅಧಿಕಾರ ವ್ಯಾಪ್ತಿಯನ್ನು ಎಸಿಬಿ ಹೊಂದಿಲ್ಲ ಎಂದು ಕಂಪನಿಯು ನ್ಯಾಯಾಲಯಕ್ಕೆ ತಿಳಿಸಿತು. ನ್ಯಾ.ಸಂಜೀವ್ ಸಚದೇವ ಅವರು ಈ ಬಗ್ಗೆ ಉತ್ತರಿಸುವಂತೆ ಆಪ್ ಸರಕಾರಕ್ಕೆ ನೋಟಿಸ್ ಹೊರಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News