ಆಗಸ್ಟ್ 30ರಂದು ‘ಆಧ್ಯಾತ್ಮಿಕ ಜ್ಞಾನ’ದ ವಿಷಯಲ್ಲಿ ಏಕ ದಿನ ಇಸ್ಲಾಮಿಕ್ ಸಮಾವೇಶ ಹಾಗೂ ಘಟಿಕೋತ್ಸವ ಕಾರ್ಯಕ್ರಮ
Update: 2016-08-22 21:45 IST
ಮಂಗಳೂರು, ಆ. 22: ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಫಾರ್ ವುಮೆನ್ ವತಿಯಿಂದ ಆಗಸ್ಟ್ 30ರಂದು ಕಲ್ಲಾಪುವಿನ ಯುನಿಟಿ ಹಾಲ್‌ನಲ್ಲಿ ‘ಆಧ್ಯಾತ್ಮಿಕ ಜ್ಞಾನ’ದ ವಿಷಯಲ್ಲಿ ಏಕ ದಿನ ಇಸ್ಲಾಮಿಕ್ ಸಮಾವೇಶ ಹಾಗೂ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3:30ರ ವರೆಗೆ ಮಹಿಳೆಯರಿಗಾಗಿ ಮಹಿಳಾ ಸಮಾವೇಶ ಹಾಗೂ 4:30ರಿಂದ 9:30ರವರೆಗೆ ಸಾರ್ವಜನಿಕ ಸಮಾವೇಶ ಮತ್ತು ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಸಮಾವೇಶದಲ್ಲಿ ಮುಂಬಯಿಯ ಶೇಖ್ ರಫೀಕ್ ಮದನಿ, ಹೈದರಾಬಾದಿನ ಅತೀಖ್ ಅಹ್ಮದ್, ಮಂಗಳೂರಿನ ಡಾ.ಹಫೀಝ್ ಸ್ವಲಾಹಿ, ಮುಂಬಯಿಯ ಮಸೀರ ಮತ್ತು ಮಂಗಳೂರಿನ ಬಿನ್ತ್ ಮೊಹಿದಿನ್ ಹಸನ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.