×
Ad

ಸದ್ದು ಮಾಡುತ್ತಿದ್ದ 4 ತಿಂಗಳ ಮಗುವಿನ ಮುಖಕ್ಕೆ ಗುದ್ದಿ ಕೊಂದ ತಂದೆ

Update: 2016-08-22 22:28 IST

ಶಿಕಾಗೊ, ಆ. 22: ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಹೆಣ್ಣು ಶಿಶುವನ್ನು 22 ಬಾರಿ ಮುಖಕ್ಕೆ ಗುದ್ದಿ ಕೊಂದ ಘಟನೆ ಅಮೆರಿಕದ ಮಿನಪೊಲಿಸ್‌ನಿಂದ ವರದಿಯಾಗಿದೆ. ಮಗು ಆಡುತ್ತಿದ್ದಾಗ ಬಾಯಿಯಿಂದ ಮಾಡುತ್ತಿದ್ದ ಸದ್ದಿನಿಂದ ಟವಿ ನೋಡುತ್ತಿದ್ದ ತಂದೆಯ ಪಿತ್ತ ನೆತ್ತಿಗೇರಿ ಈ ಹೀನ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

ಮಿನಪೊಲಿಸ್ ನಿವಾಸಿ 21 ವರ್ಷದ ಕಾರಿ ಮೊರಿಸ್‌ನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಮಗು ಮಾಡುತ್ತಿದ್ದ ಸದ್ದನ್ನು ನಿಲ್ಲಿಸಲು ಮಗುವಿನ ಮುಖ ಮತ್ತು ಎದೆಯ ಮೇಲೆ ಆತ ಪ್ರಹಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆಗಸ್ಟ್ 13ರಂದು ಪೊಲೀಸರಿಗೆ ಕರೆ ಮಾಡಿದ ಮೊರಿಸ್, ತನ್ನ ಮಗಳನ್ನು ಈಗಷ್ಟೇ ಕೊಂದಿರುವುದಾಗಿ ಹೇಳಿದನು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News