×
Ad

ಭಾರತ-ವೆಸ್ಟ್‌ಇಂಡೀಸ್ ನಾಲ್ಕನೆ ಟೆಸ್ಟ್ ರದ್ದು: ತನಿಖೆಗೆ ಟಿಟಿಸಿಬಿ ನಿರ್ಧಾರ

Update: 2016-08-23 11:10 IST

   ಪೋರ್ಟ್ ಆಫ್ ಸ್ಪೇನ್, ಆ.23: ಮೈದಾನದ ಹೊರಾಂಗಣ ಮಳೆ ನೀರಿನಿಂದ ತುಂಬಿಹೋಗಿದ್ದ ಕಾರಣ ಕೇವಲ 22 ಓವರ್‌ಗೆ ಸೀಮಿತಗೊಂಡಿದ್ದ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಸೋಮವಾರ ಡ್ರಾನಲ್ಲಿ ಸಮಾಪ್ತಿಗೊಂಡಿರುವ 4ನೆ ಟೆಸ್ಟ್ ಪಂದ್ಯದ ಬಗ್ಗೆ ತನಿಖೆ ನಡೆಸಲು ಟ್ರಿನಿಡಾಡ್ ಆ್ಯಂಡ್ ಟೊಬಾಬೊ ಕ್ರಿಕೆಟ್ ಮಂಡಳಿ (ಟಿಟಿಸಿಬಿ)ನಿರ್ಧರಿಸಿದೆ.

ಕೊನೆಯ ದಿನದಾಟವಾದ ಸೋಮವಾರ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪಂದ್ಯ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಮಳೆಯಿಂದಾಗಿ ಒದ್ದೆಯಾಗಿದ್ದ ಮೈದಾನದಿಂದಾಗಿ ಸತತ ನಾಲ್ಕನೆ ದಿನದಾಟವೂ ಒಂದು ಎಸೆತ ಕಾಣದೇ ರದ್ದುಗೊಂಡಿತ್ತು. ಮಳೆ ಬಿಡುವು ನೀಡಿ ಸೂರ್ಯನ ಕಿರಣ ಕಾಣಿಸಿಕೊಂಡರೂ ಮೈದಾನದ ಸಿಬ್ಬಂದಿಗಳ ಪ್ರಯತ್ನದ ಹೊರತಾಗಿಯೂ ಪಿಚ್‌ನ್ನು ಪಂದ್ಯಕ್ಕೆ ಫಿಟ್ ಆಗಿಸಲು ಸಾಧ್ಯವಾಗಿರಲಿಲ್ಲ.

4ನೆ ಟೆಸ್ಟ್ ಡ್ರಾಗೊಂಡ ಕಾರಣ ಭಾರತ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತ್ತು. ಆದರೆ, ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ ಎರಡನೆ ಸ್ಥಾನಕ್ಕೆ ಕುಸಿದಿತ್ತು. ಪಾಕಿಸ್ತಾನ ಮೊತ್ತ ಮೊದಲ ಬಾರಿ ನಂ.1 ಟೆಸ್ಟ್ ತಂಡವಾಗಿ ಕಾಣಿಸಿಕೊಂಡಿತ್ತು.

ಪಂದ್ಯದ ಆತಿಥ್ಯವಹಿಸಿಕೊಂಡಿರುವ ಟ್ರಿನಿಡಾಡ್ ಆ್ಯಂಡ್ ಟೊಬಾಬೊ ಕ್ರಿಕೆಟ್ ಮಂಡಳಿ ಹಾಗೂ ಕ್ವೀನ್ಸ್ ಪಾರ್ಕ್ ಕ್ರಿಕೆಟ್ ಕ್ಲಬ್ 4ನೆ ಟೆಸ್ಟ್ ಪಂದ್ಯದಲ್ಲಿ ಭಾರತ-ವಿಂಡೀಸ್ ನಡುವೆ ಕೆಲವೇ ಓವರ್ ಪಂದ್ಯ ಆಡಲು ಸಾಧ್ಯವಾಗಿದ್ದಕ್ಕೆ ವಿಷಾದಿಸುತ್ತೇವೆ. ಇನ್ನು ಮುಂದೆ ಇಂತಹ ತಪ್ಪು ನಡೆಯದಂತೆ ಮಾಡಲು ಅಲ್ಲಿ ಏನು ನಡೆದಿತ್ತು ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ’’ಎಂದು ಟಿಟಿಸಿಬಿ ಅಧ್ಯಕ್ಷ ಅಝಿಮ್ ಬಸ್ಸರತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News