ಕಡಬ ಎಎಸ್ಸೈ ಆಗಿ ಸಿ.ಟಿ. ಸುರೇಶ್ ನೇಮಕ
Update: 2016-08-23 14:32 IST
ಕಡಬ, ಆ.23: ಕಡಬ ಠಾಣೆ ಎಎಸ್ಸೈ ಗೋಪಾಲ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿದ್ದ ಸಿ.ಟಿ. ಸುರೇಶ್ ಭಡ್ತಿ ಹೊಂದಿ ನೇಮಕಗೊಂಡಿದ್ದಾರೆ. 1993ರಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿರುವ ಸಿ.ಟಿ.ಸುರೇಶ್ ಬಳಿಕ ಸುಳ್ಯ, ಬೆಳ್ಳಾರೆ, ಪುತ್ತೂರು ಟೌನ್, ಮಂಗಳೂರು, ಊರ್ವ, ಉಪ್ಪಿನಂಗಡಿ, ನೆಲ್ಯಾಡಿ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕಳೆದ 5 ವರ್ಷಗಳಿಂದ ಪುತ್ತೂರು ಸಂಚಾರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರು ಭಡ್ತಿಗೊಂಡು ಕಡಬ ಠಾಣೆಗೆ ಎಎಸ್ಸೈ ಆಗಿ ನಿಯುಕ್ತಿಗೊಂಡಿದ್ದಾರೆ.