×
Ad

ಭರದಿಂದ ಸಾಗಿದೆ ಕಾಸರಗೋಡು ಬಸ್ ನಿಲ್ದಾಣ ಕಾಮಗಾರಿ

Update: 2016-08-23 14:57 IST

ಕಾಸರಗೋಡು, ಆ.23: ಹೊಂಡಮಯವಾಗಿದ್ದ ಕಾಸರಗೋಡು ಹೊಸಬಸ್ಸು ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇಂಟರ್‌ಲಾಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಸೆಪ್ಟಂಬರ್ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ದಿನಂಪ್ರತಿ 350ಕ್ಕೂ ಅಧಿಕ ಬಸ್ಸುಗಳು ಪ್ರವೇಶಿಸುವ ಕಾಸರಗೋಡು ಹೊಸಬಸ್ಸು ನಿಲ್ದಾಣದ ಅವ್ಯವಸ್ಥೆ ಬಗ್ಗೆ ಪ್ರತಿಭಟನೆಗಳು ನಡೆದಿದ್ದವು. ಆ.28ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ ಇಂಟರ್‌ಲಾಕ್ ಜೊತೆಗೆ ಬದಿಗೆ ಕಾಂಕ್ರೀಟಿಕರಣ ಗೊಳಿಸಬೇಕಾಗಿರುವುದರಿಂದ ಇನ್ನಷ್ಟು ಕಾಲಾವಕಾಶ ಬೇಕಿದೆ. ಈಗ ಬಸ್ಸುಗಳು ನಿಲ್ದಾಣದ ಹೊರಗಡೆ ನಿಲುಗಡೆಗೊಳಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News