×
Ad

ಆನ್‌ಲೈನ್‌ನಲ್ಲಿ ಸಂಪುಟ ನಿರ್ಧಾರಗಳ ಕುರಿತ ಕ್ರಮಾನುಷ್ಠಾನ ವರದಿ: ಇಲಾಖೆಗಳಿಗೆ ಸೂಚನೆ

Update: 2016-08-23 18:19 IST

ಹೊಸದಿಲ್ಲಿ,ಆ.23: ಸಂಪುಟ ಮತ್ತು ಅದರ ಸಮಿತಿಗಳು ಕೈಗೊಳ್ಳುವ ಪ್ರಮುಖ ನಿರ್ಧಾರಗಳ ಕುರಿತಂತೆ ಕ್ರಮಾನುಷ್ಠಾನ ವರದಿಗಳ ವಿವರಗಳನ್ನು ನಿಯಮಿತವಾಗಿ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಎಲ್ಲ ಕೇಂದ್ರ ಸರಕಾರಿ ಇಲಾಖೆಗಳಿಗೆ ಸೂಚಿಸಲಾಗಿದೆ.

 ಇದಕ್ಕಾಗಿ ಇ-ಸಮೀಕ್ಷಾ ಜಾಲತಾಣವನ್ನು ಈಗಾಗಲೇ ರೂಪಿಸಲಾಗಿದ್ದು ಪ್ರತಿಯೊಂದು ನಿರ್ಧಾರಕ್ಕೆ ಸಂಬಂಧಿಸಿದಂತೆ ಪಾಲನಾ ವರದಿಯನ್ನು ಸಂಬಂಧಿತ ಇಲಾಖೆಯು ಈ ಜಾಲತಾಣದಲ್ಲಿ ನಿಯಮಿತವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಈ ವರದಿಗಳು ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ನಿರ್ಧಾರಗಳು ಅಥವಾ ನಿರ್ದೇಶಗಳಲ್ಲಿಯ ಪ್ರತಿಯೊಂದು ಅಂಶದ ನಿರ್ದಿಷ್ಟ ಅನುಷ್ಠಾನ ಸ್ಥಿತಿಗತಿಯನ್ನು ಪ್ರತಿಫಲಿಸಬೇಕಾಗುತ್ತದೆ. ಇದಕ್ಕಾಗಿ ತಾವು ಅಪ್‌ಲೋಡ್ ಮಾಡಿರುವ ಕ್ರಮಾನುಷ್ಠಾನ ವರದಿಗಳನ್ನು ಪುನರ್‌ಪರಿಶೀಲಿಸುವಂತೆ ಸಂಪುಟ ಸಚಿವಾಲಯವು ಎಲ್ಲ ಇಲಾಖೆಗಳಿಗೆ ಸೂಚಿಸಿದೆ. ಈ ಪುನರ್ ಪರಿಶೀಲನೆಯನ್ನು ಆ.31ರೊಳಗೆ ಪೂರ್ಣಗೊಳಿಸುವಂತೆ ಅವುಗಳಿಗೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News