×
Ad

10 ವರ್ಷಗಳಿಂದ ಒಂದೇ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರಿಗೆ ಟಿಆರ್‌ಎಫ್‌ನಿಂದ ಅಭಿನಂದನೆ

Update: 2016-08-23 19:44 IST

ಮಂಗಳೂರು, ಆ.23: ಒಂದೇ ಮದ್ರಸದಲ್ಲಿ ಕನಿಷ್ಠ ಹತ್ತು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸದರ್ ಮುಅಲ್ಲಿಂ ಮತ್ತು ಮುಅಲ್ಲಿಮರನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.

ಕಾರ್ಯಕ್ರಮವನ್ನು ದ.ಕಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ಉದ್ಘಾಟಿಸಿದರು. ಪಂಪ್‌ವೆಲ್ ತಖ್ವಾ ಮಸೀದಿಯ ಖತೀಬ್ ಹಾಪಿಳ್ ಅಬ್ದುರ್ರಹ್ಮಾನ್ ಸಖಾಫಿ ದುಆ ನೆರವೇರಿಸಿ ಶುಭ ಹಾರೈಸಿದರು.

ಕೂರ್ನಡ್ಕ ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಖ್ ಜಲಾಲಿ ‘ಮನುಕುಲದ ಸೇವೆಯಲ್ಲಿ ಮೌಲವಿಗಳ ಪಾತ್ರ’ ಎಂಬ ವಿಷಯದ ಕುರಿತು ಮುಖ್ಯಪ್ರಭಾಷಣಗೈದರು. ಟಿಆರ್‌ಎಫ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಆಝಾದ್ ಗ್ರೂಪ್‌ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ದ.ಕ. ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಉದ್ಯಮಿ ಡಾ.ಅಮೀರ್ ತುಂಬೆ, ಬಿಸಿಎಫ್ ದುಬೈನ ಸದಸ್ಯ ನವಾಝ್ ಕೋಟೆಕಾರ್, ಟಿಆರ್‌ಎಫ್‌ನ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮತ್ತಿತರರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ 62 ಮಂದಿ ಮದ್ರಸ ಅಧ್ಯಾಪಕರಿಗೆ ಶಾಲು ಹೊದೆಸಿ, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮನ್ಸೂರ್ ಅಹ್ಮದ್, ಕೆ.ಕೆ. ಶಾಹುಲ್ ಹಮೀದ್ ಮತ್ತು ಡಾ. ಅಮೀರ್‌ತುಂಬೆಯವರನ್ನು ಸನ್ಮಾನಿಸಲಾಯಿತು.

ರಫೀಕ್ ಮಾಸ್ಟರ್ ‘ಹುಖೂಕುಲ್ ಇಬಾದ್-ಮನುಕುಲದ ಸೇವೆ’ ಎಂಬ ವಿಷಯದ ಕುರಿತು ತರಗತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಅಸ್ಪರ್ ಹುಸೈನ್ ಬೆಂಗರೆ ವಂದಿಸಿದರು. ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಸೈದುದ್ದೀನ್ ಬಜ್ಪೆ, ಮಜೀದ್ ತುಂಬೆ, ಹುಸೈನ್ ಬಡಿಲ, ಅಸ್ಲಂ ಗೂಡಿನಬಳಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News