ಹಲ್ಲೆ ಪ್ರಕರಣದಿಂದ ಶಾಂತಿಭಂಗ: 12 ಮಂದಿಯ ವಿರುದ್ಧ ಪ್ರಕರಣ
Update: 2016-08-23 20:26 IST
ಪುತ್ತೂರು, ಆ.23: ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಗಡಿಯಾರ ವ್ಯಾಪ್ತಿಯಲ್ಲಿ ಪರಸ್ಪರ ಹಲ್ಲೆ ಪ್ರಕರಣಗಳೊಂದಿಗೆ ಸಾರ್ವಜನಿಕ ಶಾಂತಿಭಂಗವನ್ನುಂಟು ಮಾಡುತ್ತಿರುವ ಆರೋಪದಲ್ಲಿ 12 ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೆರಾಜೆಯ ಮುಹಮ್ಮದ್ ಫೈಝಲ್, ಸಲ್ಮಾನ್, ನಝೀರ್, ರಿಝಾಜ್, ಇರ್ಫಾನ್, ಉಮ್ಮರ್ ಫಾರೂಕ್, ಬುಡೋಳಿಯ ಹಬೀಬ್, ಪೇರಮೊಗ್ರುವಿನ ಉಮ್ಮರಬ್ಬ, ಉಮ್ಮರ್, ಗಡಿಯಾರದ ಅಬ್ದುಲ್ ನಝೀರ್, ಉಮ್ಮರ್ ಫಾರೂಕ್, ರಹೀಂ ಎಂಬವರ ವಿರುದ್ಧ ಶಾಂತಿಭಂಗ ಉಂಟು ಮಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸೆಕ್ಷನ್ 107 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಗಳಿಂದ ಗರಿಷ್ಠ ಅವಧಿಯ ತನಕ ಒಳ್ಳೆ ನಡತೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಲು ತಾಲೂಕು ದಂಡಾಧಿಕಾರಿಗೆ ವರದಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.