×
Ad

ಮೆಲ್ಕಾರ್: ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Update: 2016-08-23 23:06 IST

ಮೆಲ್ಕಾರ್, ಆ.23: ಇಲ್ಲಿನ ವರ್ಧಮಾನ್ ಹಾಸ್ಪಿಕೇರ್ ಆಪ್ಟಿಕ್ ಗ್ಯಾಲರಿ ಹಾಗೂ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಬಂಟ್ವಾಳ ತಾಲೂಕು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಮೆಲ್ಕಾರ್ ವರ್ಧಮಾನ್ ಹಾಸ್ಪಿಕೇರ್‌ನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಜರಗಿತು.

ಜಮಾಅತೇ ಇಸ್ಲಾಮೀ ಹಿಂದ್‌ನ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಪ್ರಯುಕ್ತ ನಡೆದ ಈ ಕಾರ್ಯಕ್ರಮವನ್ನು ಡಾ. ಸುಬ್ರಹ್ಮಣ್ಯ ಟಿ. ಬೋಳಂಗಡಿಯ ಹವ್ವಾ ಮಸೀದಿಯ ಖತೀಬ್ ಯಹ್ಯಾ ತಂಙಳ್‌ರ ತಪಾಸಣೆ ಮಾಡುವ ಮೂಲಕ ಉದ್ಘಾಟಿಸಿದರು.

ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಮೇಲ್ವಿಚಾರಕ ಮುಖ್ತಾರ್ ಅಹ್ಮದ್‌ ಅಧ್ಯಕ್ಷತೆ ವಹಿಸಿದ್ದರು. ನೇತ್ರಾಲಯದ ವೈದ್ಯ ಡಾ.ವಿಕ್ರಮ್ ಜೈನ್ ಪ್ರಸಾದ್, ಯುವ ಸಂಗಮ ಮೆಲ್ಕಾರ್‌ನ ಗೌರವಾಧ್ಯಕ್ಷ ಎಂ.ಎನ್. ಕುಮಾರ್, ವರ್ಧಮಾನ್ ಹಾಸ್ಪಿಕೇರ್ ಆಪ್ಟಿಕ್ ಗ್ಯಾಲರಿಯ ಮಾಲಕ ರಾಜೇಂದ್ರ ಜೈನ್ ಉಪಸ್ಥಿತರಿದ್ದರು. ಎಂ.ಎಚ್. ಮುಸ್ತಫಾ ನಿರೂಪಿಸಿದರು.

ಅಬೂಬಕರ್ ಸಿದ್ದೀಕ್ ಕಲ್ಲಡ್ಕ ವಂದಿಸಿದರು. ಸುಮಾರು 342 ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. 554 ಮಂದಿಗೆ ಉಚಿತವಾಗಿ ಶಸ್ತ್ರಕ್ರಿಯೆ ನಡೆಸಲಾಯಿತು. ಮತ್ತು 188 ಮಂದಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News