ಹಾಡಹಗಲೇ 2 ಮನೆಗಳಿಂದ ಕಳವು: ಆರೋಪಿಯ ಬಂಧನ
ಮಂಜೇಶ್ವರ, ಆ.23: ಕುಂಬಳೆ ಠಾಣಾ ವ್ಯಾಪ್ತಿಯ 2 ಮನೆಗಳಿಂದ ಹಾಡಹಗಲೇ ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗದು ಕಳವುಗೈದ ಪ್ರಕರಣದ ಆರೋಪಿ ಯನ್ನು ಕುಂಬಳೆ ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬದಿಯಡ್ಕ ನೆಲ್ಲಿಕಟ್ಟೆಯ ನವಾಝ್(32) ಎಂದು ಗುರುತಿಸಲಾಗಿದೆ. ಕಟ್ಟತ್ತಡ್ಕದ ಹೇಮಲತಾ ಎಂಬವರ ಮನೆಯಿಂದ ಒಂದು ಪವನ್ ಚಿನ್ನ ಹಾಗೂ 4,000 ರೂ. ಮತ್ತು ಕಳತ್ತೂರಿನ ಅಬ್ದುಲ್ಲ ಎಂಬವರ ಮನೆಯಿಂದ 2 ಪವನ್‌ನ ಸರ ಹಾಗೂ 4,500 ರೂ. ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. 2 ತಿಂಗಳ ಹಿಂದೆ ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭ ನವಾಝ್ ಮನೆಯ ಬಾಗಿಲಿನ ಲಾಕ್ ಮುರಿದು ಕಳ್ಳತನ ನಡೆಸಿದ್ದಾನೆ. ಅಬ್ದುಲ್ಲರ ಮನೆಯಿಂದ ಕಳವು ಗೈದ ಸರವನ್ನು ವಯನಾಡಿನಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿ ಪೊಲೀ ಸರಲ್ಲಿ ಹೇಳಿದ್ದಾನೆ. ನವಾಝ್ ವಿರುದ್ಧ ಬದಿಯಡ್ಕ , ಕಾಸರಗೋಡು, ಚಂದೇರಾ ಠಾಣೆಗಳಲ್ಲಿ 15ಕ್ಕೂ ಮಿಕ್ಕ ಕಳವು ಪ್ರಕರಣವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಂಬಳೆ ಎಸ್ಸೈ ಬೆಳ್ವಿನ್ ಜೋಸ್, ಅಡೀಶನಲ್ ಎಸ್ಸೈ ಸೋಮಯ್ಯ, ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.