ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ
ಉಡುಪಿ, ಆ.23: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಪೊಲೀಸರು, ಪ್ರಕರಣದ ಎಲ್ಲ ಆರೋಪಿಗಳನ್ನು ನಾಳೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಿಐಡಿ ಡಿಜಿ ಎಚ್.ಸಿ.ಕಿಶೋರ್‌ಚಂದ್ರ ಮತ್ತು ಡಿಐಜಿಪಿ ಪ್ರತಾಪ್‌ರೆಡ್ಡಿ ಉಡುಪಿಗೆ ಆಗಮಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನ ದಲ್ಲಿರುವ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್, ನಿರಂಜನ್ ಭಟ್ ಹಾಗೂ ಸಾಕ್ಷ ನಾಶಪಡಿಸಿದ ಆರೋಪಿಗಳಾದ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರರನ್ನು ಪೊಲೀಸರು ಆ.24 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.
ಪ್ರಮುಖ ಮೂವರು ಆರೋಪಿಗಳು ಕಳೆದ 9ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ನಾಳೆಗೆ ಅದರ ಅವಧಿ ಮುಗಿಯಲಿದೆ. ಈ ಪ್ರಕರಣವನ್ನು ಸಿಐಡಿ ಪೊಲೀಸರು ಕೈಗೆತ್ತಿಕೊಂಡ ಬಳಿಕ ಆರೋಪಿಗಳನ್ನು ಈವರೆಗೆ ವಿಚಾರಣೆ ನಡೆಸದ ಕಾರಣ, ನಾಳೆ ನ್ಯಾಯಾಲಯ ದಲ್ಲಿ ವಶಕ್ಕೆ ಪಡೆದು ಕೊಳ್ಳಲು ಅರ್ಜಿ ಸಲ್ಲಿಸುವ ಕುರಿತು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಕೆಲವೊಂದು ಮಹತ್ವದ ಸುಳಿವು ಹಾಗೂ ಸಾಕ್ಷಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಗಳಿವೆ. ಆದುದರಿಂದಲೇ ಸಿಐಡಿ ಹಿರಿಯ ಅಧಿಕಾರಿಗಳ ತಂಡ ಈ ಪ್ರಕರಣದ ಬೆನ್ನುಬಿದ್ದಿದೆ.
ತನಿಖೆ ಮುಂದುವರಿಕೆ: ಮಂಗಳ ವಾರ ಭಾಸ್ಕರ್ ಶೆಟ್ಟಿಯ ತಾಯಿ ಮನೆ ಸರಕಾರಿ ಗುಡ್ಡೆಗೆ ತೆರಳಿರುವ ಸೋನಿಯಾ ನಾರಂಗ್ ನೇತೃತ್ವದ ತಂಡವು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಹಾಗೂ ಕುಟುಂ ಬಸ್ಥರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಕೊಂಡಿ ರುವುದಾಗಿ ತಿಳಿ ದು ಬಂದಿದೆ.
ಅದೇ ರೀತಿ ನಂದಳಿಕೆಯಲ್ಲಿರುವ ನಿರಂಜನ್ ಭಟ್ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿಂದ ಭಾಸ್ಕರ್ ಶೆಟ್ಟಿಯ ಅಸ್ಥಿ ಎಸೆದಿದ್ದಾರೆ ಎಂದು ಹೇಳಲಾದ ಪಳ್ಳಿ, ಕಲ್ಕಾರು ಹಾಗೂ ಸಚ್ಚರಿಪೇಟೆ ಹೊಳೆಯ ಪ್ರದೇಶಗಳಿಗೂ ತೆರಳಿ ತನಿಖೆ ನಡೆಸಿ ರುವುದಾಗಿ ತಿಳಿದುಬಂದಿದೆ. ಈ ಮಧ್ಯೆ ಭಾಸ್ಕರ್ ಶೆಟ್ಟಿ ಕೊಲೆ ಪ್ರಕ ರಣದ ತನಿಖೆಯ ನೇತೃತ್ವ ವಹಿಸಿದ್ದ ಸಿಐಡಿ ಎಸ್ಪಿ ಡಾ.ರಾಜಪ್ಪ ಅವರನ್ನು ವರ್ಗಾವಣೆಗೊಳಿಸಲು ಸರಕಾ
ರ ಆದೇಶ ನೀಡಿದೆ.