ವರ್ಕಾಡಿಯ ಇಬ್ರಾಹೀಂ ಹಾಜಿ ಕಲ್ಲೂರುರವರಿಗೆ ಜೀವನ ಗೌರವ ಪ್ರಶಸ್ತಿ

Update: 2016-08-23 18:24 GMT

ಮಂಜೇಶ್ವರ, ಆ.23: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ಇದರ ದಶಮಾನೋತ್ಸವ ಸಂದರ್ಭದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡಿಗ ಮಂಜೇಶ್ವರದ ವರ್ಕಾಡಿ ನಿವಾಸಿ ಇಬ್ರಾಹೀಂ ಹಾಜಿ ಕಲ್ಲೂರುರವರಿಗೆ ಜೀವಮಾನ ಸಾಧನೆಗಾಗಿ ಜೀವನ ಗೌರವ ಪ್ರಶಶ್ತಿಯನ್ನು ನೀಡಿ ಗೌರವಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ನೇರವೇರಿಸಿದರು. ಮೃತುಂಜಯ ಮಹಾಸ್ವಾಮಿ ಶ್ರೀ ಮನಿಪ್ರ ಜಗದ್ಗುರು ಬಸವಜಯ ಪಂಚಮಸಾಲಿ ಪೀಠ ಕೂಡಲಸಂಗಮ ಆಶೀರ್ವದಿಸಿದರು. ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಂಗಾವತಿ ವಿಶ್ರಾಂತ ನ್ಯಾಯಧೀಶ, ನ್ಯಾಯ ಮೂರ್ತಿ ಅರಳಿ ನಾಗರಾಜ, ವಿಶ್ವದಾಖಲೆ ಸೃಷ್ಠಿಸಿದ ಕವಿ ಡಾ.ದೊಡ್ಡ ರಂಗೇಗೌಡ, ರಂಗರಾಜ್ ವನದುರ್ಗ,ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ, ನಟಿ ದೀಪಾ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಕಲ್ಲೂರು ಇಬ್ರಾಹೀಂ ಹಾಜಿಯವರು ಸಾಮಾಜಿಕ ಸೇವೆಯನ್ನುಗೈಯುತ್ತಿದ್ದಾರೆ. ಈ ಹಿಂದೆ ಇವರು ನಾಗರೀಕ ಕ್ರೀಯಾ ಸಮಿತಿಯ ನೇತೃತ್ವದ ಮೂಲಕ ಹಲವಾಡು ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ, ಕಾರವಾರದ ಕೆಲವೊಂದು ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಔಷದಿ ವಿತರಣೆಗಳಂತಹ ಸಹಾಯವನ್ನು ನೀಡುತ್ತಾ ಬಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News