ಸೆ.1ರಿಂದ ಜಿಲ್ಲಾ ನಗರ ಕೇಂದ್ರದಲ್ಲಿ ಆಹಾರ ಭದ್ರತಾ ಕೂಪನ್: ಸಚಿವ ಖಾದರ್

Update: 2016-08-23 18:29 GMT

ಮಂಗಳೂರು, ಆ.23: ಬೋಗಸ್ ಬಿಪಿಎಲ್ ಪಡಿತರ ಚೀಟಿಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಆಹಾರ ಭದ್ರತಾ ಚೀಟಿ (ಕೂಪನ್) ವಿತರಣೆ ಸೆ.1ರಿಂದ ರಾಜ್ಯದ ಎಲ್ಲ ಜಿಲ್ಲಾ ನಗರ ಕೇಂದ್ರಗಳಲ್ಲಿ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯ ಲ್ಲಿಂದು ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಸೇವಾ ಕೇಂದ್ರಗಳು, ಕಂದಾಯ ಇಲಾಖೆಯ ಜನಸ್ನೇಹಿ, ಮಂಗಳೂರು ಒನ್‌ಗಳಲ್ಲಿ ಕೂಪನ್ ಕೊಡುವ ವ್ಯವಸ್ಥೆ ಇದೆ. ಇದೀಗ ಮಂಗಳೂರಿನಲ್ಲಿ ಕೂಪನ್ ವಿತರಣೆಗೆ ್ರಾಂಚೈಸಿ ಕೋರಿ 20 ಅರ್ಜಿಗಳು ಬಂದಿವೆ. ಬೆಂಗಳೂರಿನಲ್ಲಿ 100ಕ್ಕೂ ಅಕ ಅರ್ಜಿಗಳು ಬಂದಿವೆ. ಈ ಕೇಂದ್ರಗಳ ಮೂಲಕ ವಿತರಣೆ ಮಾಡುವ ಪ್ರತಿ ಕೂಪನ್‌ಗೆಆಹಾರ ಇಲಾಖೆಯ ವತಿಯಿಂದ 5 ರೂ. ಶುಲ್ಕ ಪಾವತಿಸಲಾಗುವುದು ಎಂದು ಹೇಳಿದರು. ಅಕ್ಟೋಬರ್‌ನಿಂದ ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲೂ ಈ ಯೋಜನೆ ಜಾರಿಗೆ ಬರಲಿದೆ. ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಆರಂಭದಲ್ಲಿ ಪ್ರತಿ ತಿಂಗಳು ಕೂಪನ್ ವಿತರಿಸಲಾಗುವುದು. ನಂತರ ವರ್ಷಕ್ಕೆ ಒಂದು ಬಾರಿ ಕೂಪನ್ ವಿತರಿಸುವ ಕ್ರಮ ಜಾರಿಗೆ ತರಲಾಗುವುದು. ವಿಕಲಚೇತನರು, ವಯೋವೃದ್ಧರಿಗೆ ಆಹಾರ ಇಲಾಖೆಯ ಅಕಾರಿಗಳು ಅವರ ಬಳಿ ಹೋಗಿ ಕೂಪನ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಗ್ರಾಪಂಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಆನ್‌ಲೈನ್ ವ್ಯವಸ್ಥೆಯಲ್ಲಿ ಪಡಿತರ ಚೀಟಿ ವಿತರಿಸುವ ತೀರ್ಮಾನವನ್ನು ತಮ್ಮ ಇಲಾಖೆ ಕೈಗೊಂಡಿದೆ. ಆದರೆ, ಪಡಿತರ ಚೀಟಿಗಳ ವಿತರಣೆಯ ಅಕಾರವನ್ನು ಸ್ಥಳೀಯ ಸಂಸ್ಥೆಗಳ ಅಕಾರಿಗಳಿಗೆ ನೀಡುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಆದೇಶ ಹೊರಡಿಸಿದ ಬಳಿಕ ಹೊಸ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಅವರು ಹೇಳಿದರು. ಮೊಬೈಲ್ ಮೂಲಕ ಕೂಪನ್: ಪಡಿತರ ಚೀಟಿ ದಾರರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ವ್ಯವಸ್ಥೆಯಡಿ ಆಹಾರ ಭದ್ರತಾ ಚೀಟಿ ವಿತರಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

ಹೊಸ ವಿಧಾನದ ಬಳಕೆ ಈಗ ಪರೀಕ್ಷಾ ಹಂತದಲ್ಲಿದೆ. ಪಡಿತರ ಚೀಟಿಯ ಸಂಖ್ಯೆ, ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಮತ್ತ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುವುದು. ಪಡಿತರ ಚೀಟಿದಾರರು ನೋಂದಾಯಿತ ಮೊಬೈಲ್‌ನಿಂದ ಟೋಲ್ ಫ್ರೀ ಸಂಖ್ಯೆಗೆ ಕರೆಮಾಡಿ ‘4’ ಅನ್ನು ಒತ್ತಬೇಕು. ನಂತರ ಅವರ ಆಧಾರ್ ಸಂಖ್ಯೆಯನ್ನು ದಾಖಲಿಸಬೇಕು. ಆಗ ಎಸ್‌ಎಂಎಸ್ ಮತ್ತು ಧ್ವನಿ ಸಂದೇಶದ ಮೂಲಕ ಅವರ ವೊಬೈಲ್‌ಗೆ ಕೂಪನ್ ಲಭ್ಯವಾಗಲಿದೆ ಎಂದು ಸಚಿವ ಖಾದರ್ ತಿಳಿಸಿದರು. ತಾಳೆ ಎಣ್ಣೆ ಹಾಗೂ ಸೂರ್ಯಕಾಂತಿ/ತೆಂಗಿನ ಎಣ್ಣೆ: ಪಡಿತರ ವ್ಯವಸ್ಥೆಯಡಿ ಬಿಪಿಎಲ್ ಕುಟುಂಬಗಳಿಗೆ ಪ್ರಸ್ತುತ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ ಪಾಮ್ (ತಾಳೆ)ಎಣ್ಣೆಗೆ ಪೂರಕವಾಗಿ ಸೂರ್ಯಕಾಂತಿ ಅಥವಾ ತೆಂಗಿನ ಎಣ್ಣೆಯನ್ನು ಆಯ್ಕೆ ಮಾಡುವ ಅವಕಾಶ ಲಭ್ಯವಾಗಲಿದೆ ಎಂದವರು ಹೇಳಿದರು.

ಪ್ರಸ್ತುತ 35ರಿಂದ 38 ರೂ. ಸಬ್ಸಿಡಿ ದರದಲ್ಲಿ ಪಡಿತರ ಚೀಟಿದಾರರಿಗೆ ಪಾಮ್ ಎಣ್ಣೆಯನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಮ್ ಅಲ್ಲದೆ, ಸೂರ್ಯಕಾಂತಿ ಹಾಗೂ ತೆಂಗಿನ ಎಣ್ಣೆಯನ್ನೂ ಸಬ್ಸಿಡಿ ದರದಲ್ಲಿ ಪಡೆಯುವ ಅವಕಾಶವಿದೆ. ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಪಾವತಿಸತಕ್ಕದ್ದು. ಇದರಿಂದ ಸರಕಾರಕ್ಕೆ ಯಾವುದೇ ರೀತಿಯ ಹೆಚ್ಚಿನ ಹೊರೆಯಾಗದು. ಆದರೆ, ಜನಸಾಮಾನ್ಯರಿಗೆ ತೆಂಗಿನ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಸಬ್ಸಿಡಿ ದರದಲ್ಲಿ ದೊರಕಲಿದೆ. ಇದರಿಂದ ಮುಂದೆ ತೆಂಗಿನ ಬೆಲೆಯಲ್ಲೂ ಹೆಚ್ಚಳಕ್ಕೆ ಸಾಧ್ಯವಾದೀತು. ಮುಂದಿನ ಒಂದೆರಡು ತಿಂಗಳಲ್ಲಿ ಪಡಿತರ ವ್ಯವಸ್ಥೆಯಡಿ ಇದು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News