ಗೋರಕ್ಷಕರಲ್ಲಿ ಶೇ. 80ರಷ್ಟು ಕ್ರಿಮಿನಲ್‌ಗಳು: ಸಚಿವ ರೈ

Update: 2016-08-23 18:33 GMT

ಮಂಗಳೂರು, ಆ.23: ಗೋರಕ್ಷಕರಲ್ಲಿ ಶೇ.80ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯವರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತಿಚೆಗೆ ಹೇಳಿದ್ದಾರೆ. ಆದರೆ ಇದನ್ನು ನಾವು ಈ ಹಿಂದೆಯೇ ಹೇಳಿದ್ದೆವು. ಕರಾವಳಿ ಜಿಲ್ಲೆಯಲ್ಲಿ ಗೋರಕ್ಷಕರು ಬಜರಂಗದಳದವರು. ಇವರಲ್ಲಿ ಶೇ. 80ಕ್ಕೂ ಅಕ ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಣೆಯ ಹೆಸರಿನಲ್ಲಿ ಸಾಕಷ್ಟು ಮಂದಿ ಶಾಸಕರಾಗಿ ದ್ದಾರೆ. ಧರ್ಮ, ದೇಶ ಪ್ರೇಮದ ಹೆಸರಿನಲ್ಲಿ ಮತೀಯ ಭಾವನೆಯನ್ನು ಕೆರಳಿಸಿ ಅಕಾರಕ್ಕೇ ರಿದ್ದಾರೆ ಎಂದರು. ಬಜರಂಗದಳದ ಪದಾಕಾರಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರು. ಮೊದಲು ಈ ಸಂಘಟನೆಗಳು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮತ್ತು ಈಗ ಹಿಂದುಳಿದ ವರ್ಗದವರನ್ನು ಗುರಿಯಾಗಿರಿಸಿಕೊಂಡಿದೆ. ಇದನ್ನು ಪ್ರಜ್ಞಾ ವಂತ ನಾಗರಿಕರು ಅರಿತುಕೊಂಡು ಇಂತಹ ವರನ್ನು ದೂರ ಇಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.


ಗೋ ರಕ್ಷಣೆಯ ಹೆಸರಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸೆಗಳು ನೋವು ತರುವಂತದ್ದು. ಧರ್ಮ, ದೇವರು, ದೇಶಪ್ರೇಮದ ಹೆಸರಿನಲ್ಲಿ ಸಮಾಜಕ್ಕೆ ತೊಂದರೆ ಮಾಡುವ ಕೆಲಸ ಆಗುತ್ತಿದೆ. ನಾನವರನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ. ಅವರು ಚಡ್ಡಿ ಪರಿವಾರ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಗೋ ರಕ್ಷಣೆಯ ಹೆಸರಿನಲ್ಲಿ ಸಾಮರಸ್ಯ ಕದಡುತ್ತಿರುವುದು ಮಾತ್ರವಲ್ಲ, ಪ್ರಾಣವನ್ನೇ ತೆಗೆದಿದ್ದಾರೆ ಎಂದು ಉಡುಪಿ ಕೆಂಜೂರಿನ ಪ್ರವೀಣ್ ಪೂಜಾರಿ ಕೊಲೆಯನ್ನು ಖಂಡಿಸುತ್ತಾ ಮಾತನಾಡಿದ ಸಚಿವರು, ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಪ್ರಕರಣದ ಶೀಘ್ರ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸಿರುವುದಾಗಿ ಹೇಳಿದರು.

ರಾಜಕೀಯ ವೇದಿಕೆಯಾದ ವಿವಿ: ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆ
  
ತಿರಂಗಾ ಯಾತ್ರೆಯ ಹೆಸರಿನಲ್ಲಿ ರಾಣಿ ಅಬ್ಬಕಳನ್ನು ಸ್ಮರಿಸುವ ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ. ಅಬ್ಬಕ್ಕಳಿಗೆ ಗೌರವ ನೀಡುವ ಕಾರ್ಯಕ್ರಮ ಒಂದು ನಾಟಕ. ರಾಜಕೀಯ ಪಕ್ಷವೊಂದರ ಅಧ್ಯಕ್ಷರು ಸಮಾರಂಭದಲ್ಲಿ ಭಾಗವಹಿಸಿ, ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪಎಂದು ಘೋಷಿಸುವ ಮೂಲಕ ವಿಶ್ವವಿದ್ಯಾನಿಲಯವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಸಿಂಡಿಕೇಟ್ ಸದಸ್ಯರು ಆಕ್ಷೇಪಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತಾನು ಈ ಬಗ್ಗೆ ಪ್ರಶ್ನಿಸುವುದಾಗಿಯೂ ಸಚಿವ ರೈ ಹೇಳಿದರು.

ಪ್ರಧಾನಿ ಮೋದಿಯವರು, ಹಿಂದೆ ಸ್ವಾತಂತ್ರಕ್ಕಾಗಿ ಹೋರಾಟ ನಡೆದಿರಬಹುದು. ಈಗ ನಾವು ಹೋರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಬಿಜೆಪಿಗರ ಹೋರಾಟ ಅಕಾರಕ್ಕಾಗಿ ಮಾತ್ರ. ಕಾಂಗ್ರೆಸ್ಸಿಗರ ಹೋರಾಟ ದೇಶಕ್ಕಾಗಿ ಎಂದು ಸಚಿವ ರೈ ಹೇಳಿದರು. ಬಿಜೆಪಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಈಗ ಅಬ್ಬಕ್ಕಳ ನೆನಪು ಮಾಡುತ್ತಿದ್ದಾರೆ, ರಾಜ್ಯ ಸರಕಾರ ಎಂದೋ ಆ ಕೆಲಸ ಮಾಡಿದೆ. ತಿರಂಗಾ ಯಾತ್ರೆ ಜನರಿಗೆ ಮಂಕುಬೂದಿ ಎರಚುವ ತಂತ್ರ. ಬಡತನ ಹೋಗಲಾಡಿಸಲು ಕೇಂದ್ರದ ಎನ್‌ಡಿಎ ಸರಕಾರ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಆದರೆ ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಭೂಮಾಲಕ ಮೊದಲಾದ ಕಾನೂನುಗಳ ಮೂಲಕ ಕಾಂಗ್ರೆಸ್ ಸರಕಾರ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ದೇಶದ ಜನರಿಗೆ ನೀಡಿದೆ. ಆದರೆ ಇವರು ಸ್ವಾತಂತ್ರದ ಹಿಂದಿನ ದಿನ ಪಂಜಿನ ಮೆರವಣಿಗೆ ಮಾಡುತ್ತಾರೆ ಎಂದು ಕಟಕಿಯಾಡಿದರು.

ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಪಕ್ಷದ ನಾಯಕರಾದ ಬಿ.ಎಚ್. ಖಾದರ್, ಸುರೇಶ್ ಬಲ್ಲಾಳ್, ಪದ್ಮನಾಭ ನರಿಂಗಾನ, ಸದಾಶಿವ ಉಳ್ಳಾಲ್, ಮಿಥುನ್ ರೈ, ಸಂತೋಷ್ ಶೆಟ್ಟಿ, ಯು.ಕೆ. ಮೋನು, ವಿಶ್ವಾಸ್ ದಾಸ್, ನಝೀರ್ ಬಜಾಲ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಅಬ್ದುರ್ರವ್ೂ, ಎ.ಸಿ. ವಿನಯರಾಜ್, ಕವಿತಾ ಸನಿಲ್, ಪದ್ಮಶಂಕರ್ ಜೈನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News