ಈ ಎನ್ ಜಿ ಒ ಗೆ ನಿರಂತರ ಬರುತ್ತಿರುವ ಪ್ರಶ್ನೆ - "ನಾನು ನನ್ನ ಕಿಡ್ನಿ ಮಾರುವುದು ಹೇಗೆ "?

Update: 2016-08-24 03:36 GMT

ಮುಂಬೈ, ಆ.24: ಮೋಹನ್ ಫೌಂಡೇಷನ್ ಎಂಬ ಈ ಸ್ವಯಂಸೇವಾ ಸಂಸ್ಥೆಗೆ ನಿರಂತರವಾಗಿ ಸಾರ್ವಜನಿಕರಿಂದ ಎದುರಾಗುತ್ತಿರುವ ಪ್ರಶ್ನೆ ಏನು ಗೊತ್ತೇ? "ನಾನು ನನ್ನ ಕಿಡ್ನಿ ಮಾರುವುದು ಹೇಗೆ?" ಎನ್ನುವುದು.

ಶವಗಳ ಅಂಗಾಂಗ ದಾನದ ಬಗ್ಗೆ 1997ರಿಂದಲೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ. ಈ ಸಂಸ್ಥೆಗೆ ಇಂಥ ಸಮಸ್ಯೆ ನಿಭಾಯಿಸುವುದೇ ದೊಡ್ಡ ಸವಾಲಾಗಿದೆ.

"ನಮ್ಮ ಫೇಸ್‌ಬುಕ್ ಪೇಜ್ ಅಥವಾ ಇ-ಮೇಲ್ ಇಲ್ಲವೇ ಟೋಲ್ ಫ್ರೀ ಸಂಖ್ಯೆಗೂ ಬರುವ ಕರೆಗಳು ಕಿಡ್ನಿ ಮಾರಾಟಕ್ಕೆ ಸಂಬಂಧಿಸಿದವು ಎಂದು ಪ್ರತಿಷ್ಠಾನದ ವೈದ್ಯ ಡಾ.ಸುನೀಲ್ ಶ್ರಾಫ್ ಹೇಳುತ್ತಾರೆ. ಇಂಥ ಪ್ರಶ್ನೆಗಳನ್ನು ಡಿಲೀಟ್ ಮಾಡುವುದೇ ಒಬ್ಬನಿಗೆ ಇಡೀ ದಿನದ ಕೆಲಸವಾಗುತ್ತದೆ ಎಂದು ಅವರು ಹೇಳುತ್ತಾರೆ. ಭಾರತೀಯರು ಕಿಡ್ನಿಯನ್ನು ಮಾರಾಟದ ಸರಕು ಎಂದು ಪರಿಗಣಿಸಿದಂತಿದೆ ಎಂದು ಅವರು ಹೇಳುತ್ತಾರೆ.

ಕಿಡ್ನಿ ಅಥವಾ ಅಂಗಾಂಗ ಮಾರಾಟ ಕಾನೂನುಬಾಹಿರ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಮಾನವ ಅಂಗಾಂಗ ಕಾಯ್ದೆಗೆ 2014ರಲ್ಲಿ ತಿದ್ದುಪಡಿ ತಂದು, ಅಂಗಾಂಗ ಮಾರಾಟಕ್ಕೆ ಒಂದು ಕೋಟಿ ರೂ.ವರೆಗೆ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸುತ್ತಿರುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ವೆಬ್‌ಸೈಟ್‌ಗಳಲ್ಲೂ ಬಹಿರಂಗವಾಗಿ ಈ ಬಗ್ಗೆ ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ಅವರು ವಿವರಿಸುತ್ತಾರೆ.

9 ರಿಂದ 45 ಲಕ್ಷವರೆಗೂ ಬೆಲೆ ನಿಗದಿಪಡಿಸಿ ಕಿಡ್ನಿ ಮಾರಾಟದ ಜಾಹೀರಾತು ನೀಡುತ್ತಾರೆ. ಬಡತನದ ಕಾರಣದಿಂದ ಬಹಳಷ್ಟು ಮಂದಿ ಇದಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ಅವರ ವಿವರಣೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News