ನಾಗರಿಕತೆಯನ್ನು ತೋರಿಸಲು ಇರೋಮ್ ಶರ್ಮಿಳಾಗೆ ದಾಖಲೆಗಳೇ ಇಲ್ಲ !

Update: 2016-08-24 07:49 GMT

ಇಂಫಾಲ, ಅಗಸ್ಟ್ 24: ದೇಶದ ಅತ್ಯಂತ ಪ್ರಸಿದ್ಧ ನಾಗರಿಕ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾಗೆ ತಾನು ಭಾರತೀಯಳೆಂದು ವ್ಯಕ್ತಪಡಿಸುವ ಯಾವೊಂದು ದಾಖಲೆಗಳೇ ಇಲ್ಲ ಎಂದು ವರದಿಯಾಗಿದೆ. ಪಾನ್‌ಕಾರ್ಡ್ ಇಲ್ಲ, ಬ್ಯಾಂಕ್‌ಖಾತೆ ಇಲ್ಲ, ಮತದಾನದ ಗುರುತು ಚೀಟಿ ಇಲ್ಲ, ಹೀಗಾಗಿ ಇರೋಮ್ ಶರ್ಮಿಳಾ ಈ ಎಲ್ಲ ದಾಖಲೆಗಳನ್ನು ಹೊಸದಾಗಿ ಸಂಗ್ರಹಿಸಿಕೊಳ್ಳಬೇಕಿದೆ ಎನ್ನಲಾಗಿದೆ. ಚುನಾವಣೆಗಿಳಿಯುವಾಗ ಹಣಕಾಸುವ್ಯವಹಾರಕ್ಕೆ ಪಾನ್‌ಕಾರ್ಡ್, ಬ್ಯಾಂಕ್ ಖಾತೆ ಅತ್ಯಗತ್ಯವಾಗಿರುತ್ತದೆ ಎಂದು ಶರ್ಮಿಳಾರ ಗೆಳೆಯರು ಹೇಳುತ್ತಿದ್ದಾರೆ. ಆದ್ದರಿಂದ ಅವು ಈಗ ಶರ್ಮಿಳಾಗೆ ಅಗತ್ಯದಾಖಲೆಗಳನ್ನು ಮಾಡಿಸಿಕೊಡುವ ನಿಟ್ಟನಲ್ಲಿ ಕೆಲಸಮಾಡುತ್ತಿದ್ದಾರೆ.

ಸತ್ಯಾಗ್ರಹವನ್ನು ಕೊನೆಗೊಳಿಸಿದ ಬಳಿಕ ಆಸ್ಪತ್ರೆಯಲ್ಲೇ ಇರುವ 44 ವರ್ಷಪ್ರಾಯವಾಗಿರುವ ಶರ್ಮಿಳಾರ ಜೊತೆಯಲ್ಲಿ ನಂದಿನಿ, ರಂಜಿತ್, ಮೋನಿಕ, ರಿತಿಕ್ ಎಂಬ ಗೆಳೆಯರ ಕೂಟವಿದೆ. ಶರ್ಮಿಳಾ ಚುನಾವಣೆಗೆ ನಿಂತರೆ ಈವರೆಗೂ ಚುನಾವಣೆಯನ್ನು ಬಹಿಷ್ಕರಿಸಿದ್ದವರು ವೋಟು ಹಾಕಬಹುದೆಂಬ ನಿರೀಕ್ಷೆ ಗೆಳೆಯರಲ್ಲಿದೆ. ಮುಂದಿನ ವರ್ಷ ನಡೆಯಲಿರುವ ಮಣಿಪುರ ಚುನಾವಣೆಯಲ್ಲಿ ಶರ್ಮಿಳಾ ಸ್ಪರ್ಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News