×
Ad

ಮೂಡುಬಿದಿರೆ: ಇಲಾಖಾ ಮಟ್ಟದ ಫುಟ್ಬಾಲ್ ಪಂದ್ಯಾಟದ ಸಮಾರೋಪ

Update: 2016-08-24 17:03 IST

ಮೂಡುಬಿದಿರೆ, ಆ.24: ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜಂಟಿ ಆಶ್ರಯದಲ್ಲಿ ಇಲಾಖಾ ಮಟ್ಟದ ಫುಟ್ಬಾಲ್ ಪಂದ್ಯಾಟವು ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜರಗಿತು.

ಶಾಲಾ ಸಂಚಾಲಕ ವಿನಯ ಕುಮಾರ ಹೆಗ್ಡೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸ್ಥಾಪಕ ಪ್ರಮುಖ ಜೆ.ಎಂ.ಪಡುಬಿದ್ರಿ, ನಮ ಜವನೆರ್ ಮಂಜನಕಟ್ಟೆ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸದಸ್ಯರಾದ ಪ್ರದೀಪ್, ದೀಪಕ್, ಪ್ರವೀಣ್ ಮಸ್ಕರೇನಸ್, ಸುವಿಧ್ ಬಜಾಜ್ ಮೂಡುಬಿದಿರೆ ಇದರ ಆಡಳಿತ ನಿರ್ದೇಶಕ ಸನ್ಮತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ನಿವೃತ್ತ ಮುಖ್ಯೋಪಾಧ್ಯಾಯ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಕಳೆದ ಆರು ಬಾರಿಯಿಂದ ಪಂದ್ಯಾಟದ ಯಶಸ್ಸಿಗೆ ಸಹಕರಿಸುತ್ತಿರುವ, ಡಿಸೆಂಬರ್‌ನಲ್ಲಿ ನಿವೃತ್ತರಾಗಲಿರುವ ಗುಮಾಸ್ತ ಗುಣಪಾಲ ಮುದ್ಯ ಅವರನ್ನು ಸಂಘಟನಾ ಸಮಿತಿಯಿಂದ ಸನ್ಮಾನಿಸಲಾಯಿತು.

ಪಂದ್ಯಾಟದ ಪ್ರಮುಖ ಪ್ರಾಯೋಜಕರಾದ ಭಾರತ್ ಆಟೋಕಾರ್ಸ್‌, ಮೂಡುಬಿದಿರೆಯ ಬೀಮಲ್ ಇನ್ಫ್ರಾಸ್ಟ್ರಕ್ಚರ್‌ನ ಪ್ರವೀಣ್ ಕುಮಾರ್, ಬೆಳುವಾಯಿಯ ಉದ್ಯಮಿ ಜೋನ್ ಟ್ರೋಫಿಗಳ ಕೊಡುಗೆ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಎಸ್.ಸದಾಶಿವ ಶೆಟ್ಟಿ ಸ್ವಾಗತಿಸಿದರು. ದೈ.ಶಿ. ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಪಿ.ಎನ್.ಪುರುಷೋತ್ತಮ ರಾವ್ ಹಾಗೂ ದೇವದಾಸ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದ ಸಂಘಟಕ, ದೈ.ಶಿ. ಪ್ರಶಾಂತ್ ಕುಮಾರ್ ಜೈನ್ ವಂದಿಸಿದರು.


ಫಲಿತಾಂಶ

ಪ್ರೌಢಶಾಲಾ ವಿಭಾಗ

ಹುಡುಗರು

ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರ್ (ಪ್ರಥಮ) 

ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ನಿಡ್ಡೋಡಿ (ದ್ವಿತೀಯ).


ಹುಡುಗಿಯರು:

ಸೈಂಟ್ ಥೋಮಸ್ ಆಂ.ಮಾ.ಶಾಲೆ (ಪ್ರಥಮ)

ಸ್ವಾಮಿ ಮುಕ್ತಾನಂದ ಪರಮಹಂಸ ಬೆಳುವಾಯಿ (ದ್ವಿತೀಯ).

ಹಿರಿಯ ಪ್ರಾಥಮಿಕ ವಿಭಾಗ

ಹುಡುಗರು

ಡಿ.ಜೆ.ಆಂ.ಮಾ.ಶಾಲೆ (ಪ್ರಥಮ)

ಡಿ.ಜೆ.ಹಿ.ಪ್ರಾ.ಶಾಲೆ (ದ್ವಿತೀಯ).

ಹುಡುಗಿಯರು

ಡಿ.ಜೆ. ಹಿ.ಪ್ರಾ.ಶಾಲೆ (ಪ್ರಥಮ)

ಸೈಂಟ್ ಥೋಮಸ್ ಆಂ.ಮಾ.ಶಾಲೆ (ದ್ವಿತೀಯ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News