×
Ad

ಶಾರದಾ ಚೀಟಿ ಅವ್ಯವಹಾರ ಪ್ರಕರಣ: ನಳಿನಿ ಚಿದಂಬರಂಗೆ ಸಮನ್ಸ್

Update: 2016-08-24 17:38 IST

ಹೊಸದಿಲ್ಲಿ,ಆ.24: ಮಾಜಿ ಕೇಂದ್ರ ಸಚಿವರೂ ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಪಿ ಚಿದಂಬರಂರ ಪತ್ನಿ ನಳಿನಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಶಾರದಾ ಚೀಟಿ ಅವ್ಯವಹಾರ ತನಿಖೆಗೆ ಸಂಬಂಧಿಸಿ ಪ್ರಶ್ನಿಸಲು ತನ್ನ ಮುಂದೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಸಮನ್ಸ್ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.

  ಚೀಟಿ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ನಳಿನಿ ಚಿದಂಬರಂ ಹೆಸರನ್ನೂ ಉಲ್ಲೇಖಿಸಲಾಗಿದೆ. ಕಳೆದ ಮಾರ್ಚ್‌ನಲ್ಲಿ ನಳಿನಿ ಚಿದಂಬರಂಗೆ ಸಿಬಿಐ ಸಮನ್ಸ್ ಜಾರಿಗೊಳಿಸಿತ್ತು. ಚೀಟಿ ಅವ್ಯವಹಾರದಲ್ಲಿಮಾಜಿ ಸಚಿವರೊಬ್ಬರ ಪತ್ನಿ ಮನೋರಂಜನಾ ಸಿಂಗ್ ಎಂಬವರಿಗೆ ನಳಿನಿ ಚಿದಂಬರಂ ಕಾನೂನು ಸಲಹೆಗಾರ್ತಿಯಾಗಿದ್ದರು ಎನ್ನಲಾಗಿದೆ.ನಳಿನಿ ಸೆಪ್ಟಂಬರ್ ಮೊದಲ ವಾರದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಹಾಜರಿರಬೇಕು ಎಂದು ಸಮನ್ಸ್‌ನಲ್ಲಿಸೂಚಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News