ಸೈಕಲ್‌ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಸವಾರ ಮೃತ್ಯು
Update: 2016-08-24 18:07 IST
ಬೆಳ್ತಂಗಡಿ, ಆ.24: ಧರ್ಮಸ್ಥಳದಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗುರುವಾಯನಕೆರೆಯ ಅರಮಲೆಬೆಟ್ಟ ಎಂಬಲ್ಲಿ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮುಂಡೂರು ಗ್ರಾಮದ ಕಲ್ಯಾರ ನಿವಾಸಿ ಸಿಲ್ವೆಸ್ಟರ್ ವೇಗಸ್(67) ಎಂಬವರೇ ಮೃತಪಟ್ಟವರು.
ಇವರು ಗುರುವಾಯನಕೆರೆಯಿಂದ ಮುಂಡೂರಿನ ತನ್ನ ಮನೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಧರ್ಮಸ್ಥಳದಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.