ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಿರುದ್ಧ ಅಪಪ್ರಚಾರ: ದುಬೈನಲ್ಲಿ ಸಂಸ್ಥೆಯ ಮಾಜಿ ಉದ್ಯೋಗಿಯ ಬಂಧನ

Update: 2016-08-24 15:10 GMT

ಮಂಗಳೂರು,ಆ.24: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೊ ಬಳಸಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ದುಬೈನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

 ಬಂಧಿತನನ್ನು ಕೇರಳದ ತ್ರಿಶೂರ್ ಮೂಲದ ಬಿನೀಶ್ ಹೊನಂಕಲ್ ಆರ್ಮುಗಂ ಎಂದು ಗುರುತಿಸಲಾಗಿದೆ. ಈತ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಮಾಜಿ ಉದ್ಯೋಗಿ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೊ ಬಳಸಿ ಅಪಪ್ರಚಾರ ಮಾಡುತ್ತಿರುವ ವಿರುದ್ಧ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ದುಬೈ ಪೊಲೀಸ್‌ಗೆ ದೂರು ನೀಡಿತ್ತು. ದುಬೈ ಪೊಲೀಸ್‌ನ ಸೈಬರ್ ವಿಭಾಗ ದುಬೈನಲ್ಲಿ ಫೇಸ್‌ಬುಕ್ ಮೂಲಕ ಫೋಟೊ ಮೊದಲು ಪ್ರಕಟಿಸಲು ಆರಂಭಿಸಿದ ಬಿನೀಶ್‌ನನ್ನು ಬಂಧಿಸಿದೆ. ದುಬೈ ಪೊಲೀಸರು ಈ ಬಗ್ಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಗೆ ಕಳುಹಿಸಿರುವ ಅಧಿಕೃತ ಮಾಹಿತಿಯಲ್ಲಿ ಬಂಧಿತ ವ್ಯಕ್ತಿ ನಕಲಿ ಫೋಟೊ ಬಳಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದೆ.

ಈತ ಫೋಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್‌ನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ. ಪಾಕಿಸ್ತಾನದ ಧ್ವಜ ಹಾಕಿಕೊಂಡು ಕೇಕ್ ಕತ್ತರಿಸುತ್ತಿರುವ ಚಿತ್ರವನ್ನು ಈತ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News