×
Ad

ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ: ಜಿಲ್ಲಾಕಾರಿ

Update: 2016-08-24 23:53 IST

ಉಡುಪಿ, ಆ.24: ಎಲ್ಲ ಮಿತಿಗಳ ನಡುವೆಯೂ ಜಿಲ್ಲೆಯ ಹಿರಿಯ ನಾಗರಿಕರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಕಾರಿ ಟಿ. ವೆಂಕಟೇಶ್ ಹೇಳಿದ್ದಾರೆ. ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರಿಗೆ ರಕ್ಷಣಾ ಕಾಯ್ದೆ ಅನುಷ್ಠಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಫಿಜಿಷಿಯನ್‌ಗಳ ಕೊರತೆ ಇರುವ ಬಗ್ಗೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ 10 ಹಾಸಿಗೆಗಳ ವಾರ್ಡ್ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಸರ್ಜನ್ ಮಾಹಿತಿ ನೀಡಿದರು. ಪೊಲೀಸ್ ಅೀಕ್ಷಕರ ಕಚೇರಿ ಆವರಣದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ನಡೆಸಲು ಸ್ಥಳಾವಕಾಶದ ಕೊರತೆ ಇರುವುದರಿಂದ ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ತಾತ್ಕಾಲಿಕವಾಗಿ ಅದನ್ನು ನಡೆಸಲಾಗುತ್ತಿದೆ. ಅದನ್ನು ಪೊಲೀಸ್ ಅೀಕ್ಷಕರ ಕಚೇರಿಯಲ್ಲಿ ಸಹಾಯವಾಣಿ ನಡೆಸುವಂತೆ ಜಿಲ್ಲಾಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 20 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಹೆಸರು ನೋಂದಾಯಿಸಬೇಕು ಎಂದು ಜಿಲ್ಲಾಕಾರಿ ಸೂಚಿಸಿದರು. ಕುಂದಾಪುರ ಹಿರಿಯ ನಾಗರಿಕರ ವೇದಿಕೆಯು ಜನವರಿಯಿಂದ ಗುರುತು ಚೀಟಿ ವಿತರಿಸುವ ಕಾರ್ಯ ಆರಂಭಿಸಿದೆ. 12,740 ಕಾರ್ಡ್‌ಗಳನ್ನು ವಿತರಿಸಲಾಗಿದೆ. 2,000 ಹಿರಿಯ ನಾಗರಿಕರು ಸಂಘದ ಸದಸ್ಯರಾಗಿದ್ದಾರೆ. ಹಿರಿಯ ನಾಗರಿಕರ ಸಹಾಯವಾಣಿಗೆ ಬಿಡಗಡೆಗೊಂಡ 1,54,000 ರೂ. ಅನುದಾನ ವೆಚ್ಚವಾಗಿದೆ. ಈವರೆಗೆ 1510 ಕರೆಗಳನ್ನು ಸ್ವೀಕರಿಸಲಾಗಿದೆ. 461 ವಿವಿಧ ಸೇವೆಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಸಬಲೀಕರಣ ಅಕಾರಿ ನಿರಂಜನ ಭಟ್ ವಿವರಿಸಿದರು. ಜಿಲ್ಲೆಗೆ ಕಳೆದ ಸಾಲಿನಲ್ಲಿ ಹಿರಿಯ ನಾಗರಿಕ ಸೇವೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯ ಮೊತ್ತವನ್ನು ಐಸಿಯು ವಾರ್ಡ್ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾನವ ಹಕ್ಕುಗಳ ಪ್ರತಿಷ್ಠಾನದ ರವೀಂದ್ರನಾಥ್ ಶ್ಯಾನುಬೋಗ್ ಅವರು ಜಿಲ್ಲೆಯಲ್ಲಿರುವ ಹಿರಿಯ ನಾಗರಿಕ ಸಮಸ್ಯೆಗಳ ಬಗ್ಗೆ ಜಿಲ್ಲಾಕಾರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ಸಂಬಂಧ ಇನ್ನಷ್ಟು ಮಾಹಿತಿ ನೀಡುವ ಕಾರ್ಯಕ್ರಮ ಗಳನ್ನು ಸಂಘಟಿಸಬೇಕಿದೆ ಎಂದರು. ಜೆನರಿಕ್ ಡ್ರಗ್ಸ್ ಆರಂಭಿಸುವ ಬಗ್ಗೆ, ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಸ್ಟೆಪ್ ರಚಿಸಿ ಕೊಡುವ ಬೇಡಿಕೆಯನ್ನು ಹಿರಿಯ ನಾಗರಿಕರು ಸಭೆಯ ಮುಂದಿಟ್ಟರು.
ಹಿರಿಯ ನಾಗರಿಕರ ಪ್ರತಿನಿಗಳಾಗಿ ಸಿ.ಎಸ್.ರಾವ್, ವಾಸುದೇವ, ಲಕ್ಷ್ಮೀಬಾಯಿ ಪಾಲ್ಗೊಂಡರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ರೋಹಿಣಿ, ಯೋಜನಾ ನಿರ್ದೇಶಕ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಪೊಲೀಸ್ ಇಲಾಖೆಯಿಂದ ರಾಮಕೃಷ್ಣ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News