×
Ad

ಭಾರತೀಯ ಉದ್ಯಮಗಳಿಂದ 20 ವರ್ಷಗಳಲ್ಲೇ ಅತ್ಯಂತ ಕಡಿಮೆ ಗಳಿಕೆ

Update: 2016-08-25 12:53 IST

ನವದೆಹಲಿ, ಆ.25: ಭಾರತೀಯ ಉದ್ಯಮಗಳು 20 ವರ್ಷಗಳಲ್ಲೇ ಅತ್ಯಂತ ಕಡಿಮೆ ಗಳಿಕೆಯನ್ನುಕಂಡಿವೆಯೆಂದು ಜಾಗತಿಕ ಆರ್ಥಿಕ ಸೇವೆಗಳ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ವರದಿಯೊಂದು ತಿಳಿಸಿದೆ. ಕಡಿಮೆ ಅಭಿವೃದ್ಧಿ, ಹೆಚ್ಚಿದ ಬಡ್ಡಿ ವೆಚ್ಚಗಳು ಹಾಗೂ ಖಾಸಗಿ ವಲಯದ ಹೆಚ್ಚಿದ ಸಾಲದ ಪ್ರಮಾಣ ಇವುಗಳಿಗೆ ಕಾರಣವೆಂದು ವರದಿ ಹೇಳಿದೆ.

ಭಾರತೀಯ ಉದ್ಯಮಗಳು 2001-02 ಹಾಗೂ 2008-09ರಲ್ಲೂ ಗಳಿಕೆಯಲ್ಲಿ ಕುಸಿತ ಕಂಡಿದ್ದರೂ ಈ ಬಾರಿಯ ಕುಸಿತ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದೆ ಎಂದು ಈ ವರದಿ ತಿಳಿಸಿದೆ. ಜಾಗತಿಕಪರಿಸ್ಥಿತಿಯೂಭಾರತೀಯ ಉದ್ಯಮಗಳ ಗಳಿಕೆಯ ಮೇಲೆ ಪ್ರಭಾವ ಬೀರಿದೆಯೆಂದು ಹೇಳಿದ ವರದಿ, ‘‘ನಮ್ಮಲ್ಲಿರುವ ಲಭ್ಯ (1996 ರಿಂದ) ಅಂಕಿಅಂಶಗಳ ಪ್ರಕಾರ ಈ ವರ್ಷದಲ್ಲಿ ಭಾರತೀಯ ಉದ್ಯಮಗಳ ಗಳಿಕೆ ಕನಿಷ್ಠವಾಗಿದೆ’’ ಎಂದು ಅಭಿಪ್ರಾಯಪಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ಹಾಗೂಪಿಪಿಐ ಹಣದುಬ್ಬರದಲ್ಲಿಳಿತ ಇದಕ್ಕೆ ಕಾರಣವೆಂದು ಹೇಳಿದ ವರದಿ ಜಾಗತಿಕ ಅಭಿವೃದ್ಧಿ ನಿಧಾನಗತಿಯಲ್ಲಿರುವುದರಿಂದ ಭಾರತೀಯ ಉದ್ಯಮಗಳ ಗಳಿಕೆಯೂ ನಿಧಾನವಾಗಿ ಏರುವುದೆಂದು ಅದು ತಿಳಿಸಿದೆ. ‘‘2016-18 ಅವಧಿಯಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆಯ ಪ್ರಮಾಣ 16% ಆಗಬಹುದೆಂಬ ನಿರೀಕ್ಷೆಯಿದೆ’’ ಎಂದು ವರದಿ ಮಾಹಿತಿ ನೀಡಿದೆ.
ವಿಶ್ವದ ಇತರೆಡೆಗಳ ಉದ್ಯಮರಂಗಗಳ ಗಳಿಕೆಯೂ ಸಮಾಧಾನಕರವಾಗಿಲ್ಲವೆಂದು ಹೇಳಿದ ವರದಿ ‘‘ಯುರೋಪಿಯನ್ ಯೂನಿಯನ್ನಿನಿಂದ ಬ್ರಿಟನ್ ಹೊರ ಬರಲು ನಿರ್ಧರಿಸಿರುವುದು ತಂತ್ರಜ್ಞಾನ ರಂಗದ ಗಳಿಕೆಗೆ ಸವಾಲೊಡ್ದಿದೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News