ಗಂಗಾನದಿ ನೆರೆಯಿಂದಾಗಿ 135 ಮನೆಗಳು ನೀರು ಪಾಲು: 20 ಗ್ರಾಮಗಳು ಜಲಾವೃತ
Update: 2016-08-25 13:20 IST
ಮಾಲ್ಡ(ಪ.ಬಂಗಾಳ),ಆ.25: ಗಂಗಾನದಿ ನೆರೆಯಿಂದಾಗಿ ಪಶ್ಚಿಮಬಂಗಾಳದ ಮಾಲ್ಡ ಜಿಲ್ಲೆಯಲ್ಲಿ 135 ಮನೆಗಳು ನೀರುಪಾಲಾಗಿವೆ. 20 ಗ್ರಾಮಗಳು ಜಲಾವೃತವಾಗಿವೆ ಎಂದು ವರದಿಯಾಗಿದೆ. ಗಂಗಾನದಿ ನೀರಿನ ಮಟ್ಟ ಸಾಮಾನ್ಯಮಟ್ಟಕ್ಕಿಂತ 23 ಸೆಂಟಿಮೀಟರ್ ಎತ್ತರದಲ್ಲಿ ಹರಿದಿದ್ದು, ಮನೆಗಳು ನೀರುಪಾಲಾಗಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಕಾಲಿಚ್ಚಕ್ ಬ್ಲಾಕ್ ನಂಬ್ರ ಮೂರು, ರಾತ್ತುವ ಬ್ಲಾಕ್ ನಂಬ್ರ ಒಂದು , ಮಾಣಿಕ್ ಚಕ್ ಎಂಬೆಡೆಗಳಲ್ಲಿ ನೆರೆಹಾವಳಿಯಿಂದಾಗಿ ಭಾರೀ ಹಾನಿ ಸಂಭವಿಸಿದೆ ಎಂದು ಎಡಿಎಂ ಕಾಂಚನ್ ಚೌಧರಿ ತಿಳಿಸಿದ್ದಾರೆ. ಈನಡುವೆ ತನ್ನ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿನೆರೆಯ ಆತಂಕವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದು, ಕ್ಷೇತ್ರದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ನಿಗಾವಿರಿಸಿದ್ದಾರೆಂದು ಟ್ವಿಟರ್ ಮೂಲಕ ಅವರು ತಿಳಿಸಿದ್ದಾರೆ. ಗಂಟೆಗೆ ಒಂದು ಸೆಂಟಿಮೀಟರ್‌ನಷ್ಟು ನೀರಿನಲ್ಲಿ ಹೆಚ್ಚಳ ಸಂಭವಿಸಿದೆ ಎಂದು ವಾರಣಾಸಿಯಿಂದ ವರದಿಯಾಗಿದೆ ಎಂದು ತಿಳಿದು ಬಂದಿದೆ.