×
Ad

ಅತ್ಯಾಚಾರ ಆರೋಪ: ಜೆಎನ್‌ಯು ವಿದ್ಯಾರ್ಥಿ ನಾಯಕ ಪೊಲೀಸರಿಗೆ ಶರಣು

Update: 2016-08-25 17:04 IST

ಹೊಸದಿಲ್ಲಿ,ಆಗಸ್ಟ್ 25: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ ಪ್ರಕರಣದಲ್ಲಿ ವಿದ್ಯಾರ್ಥಿನಾಯಕ ಅನ್‌ಮೋಲ್ ರತನ್ ಪೊಲೀಸರಿಗೆ ಶರಣಾಗಿದ್ದಾನೆ ಎಂದುವರದಿಯಾಗಿದೆ. ಈತ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ಆಲ್ ಇಂಡಿಯ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ(ಐಎಸ್) ಮಾಜಿ ನಾಯಕ ಆಗಿದ್ದಾನೆ. ತನ್ನ ವಕೀಲರ ಜೊತೆ ಪೊಲೀಸ್‌ಠಾಣೆಗೆ ಬಂದು ರತನ್ ಶರಣಾಗಿದ್ದು, ಅತ್ಯಾಚಾರ ಸುದ್ದಿ ಬಹಿರಂಗವಾದ ನಂತರ ಆತ ಭೂಗತನಾಗಿದ್ದ. ಈತನ ಬಂಧನಕ್ಕೆ ದಿಲ್ಲಿಪೊಲೀಸರು ಐದು ಮಂದಿ ಪೊಲೀಸರಿರುವ ತಂಡವನ್ನು ರಚಿಸಿದ್ದರು.

ಕಳೆದ ಶನಿವಾರ ಅತ್ಯಾಚಾರ ಘಟನೆ ನಡೆದಿದ್ದು, ಸಂಶೋಧನಾ ವಿದ್ಯಾರ್ಥಿನಿ ಕೇಳಿದ್ದ ಸಿನೆಮಾದ ಸಿಡಿ ತನ್ನಲಿದೆ ಎಂದು ಹೇಳಿ ಆಕೆಯನ್ನು ತನ್ನ ಹಾಸ್ಟೆಲ್ ರೂಮ್‌ಗೆ ಆತ ಕರೆಯಿಸಿಕೊಂಡಿದ್ದ ಎನ್ನಲಾಗಿದೆ.ಹಾಸ್ಟೆಲ್ ಕೋಣೆಯಲ್ಲಿ ತಂಪು ಪಾನೀಯಕ್ಕೆ ಮಾದಕವಸ್ತು ಮಿಶ್ರಣಮಾಡಿ ವಿದ್ಯಾರ್ಥಿನಿ ಪ್ರಜ್ಞೆ ಕಳಕೊಂಡಾಗ ಆತ ಅತ್ಯಾಚಾರ ಎಸಗಿದ್ದ. ವಿದ್ಯಾರ್ಥಿನಿಗೆ ಪ್ರಜ್ಞೆ ಮರುಕಳಿಸಿದಾಗ ತಾನು ಅತ್ಯಾಚಾರಕ್ಕೊಳಗಾಗಿದ್ದು ಅರಿವಾಗಿತ್ತು. ಇದನ್ನು ಹೊರಗೆ ಯಾರಲ್ಲಲ್ಲಾದರೂ ಹೇಳಿದರೆ ಕೊಂದು ಹಾಕುವೆ ಎಂದು ಆತ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

 ವಿದ್ಯಾರ್ಥಿನಿ ನಂತರ ವಸಂತ್‌ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಐಎಸ್ ತೀವ್ರ ಎಡಪಕ್ಷ ನಿಲುವು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾಗಿದ್ದು ಜೆಎನ್‌ಯುವಿನಲ್ಲಿ ಪ್ರಾಬಲ್ಯಕ್ಕೆ ಯತ್ನಿಸುತ್ತಿರುವ ಎಬಿವಿಪಿ ಘಟನೆಯನ್ನು ಮುಂದಿಟ್ಟು ಪ್ರತಿಭಟಿಸಿದ್ದರಿಂದ ಕ್ಯಾಂಪಸ್‌ನಲ್ಲಿ ಘರ್ಷಣೆಯ ಸ್ಥಿತಿ ನಿರ್ಮಾಣವಾಗಿದೆ. ಅತ್ಯಾಚಾರ ಆರೋಪಿ ರತನ್‌ ನನ್ನು ಐಎಸ್ ಈಗಾಗಲೇ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News