ಅಸ್ಲಂ ಕೊಲೆ ಪ್ರಕರಣ: ಸಿಪಿಐಎಂ ಶಾಖಾಕಾರ್ಯದರ್ಶಿ ಸೆರೆ
ಹೊಸದುರ್ಗ,ಆಗಸ್ಟ್ 25: ನಾದಾಪುರದ ಮುಸ್ಲಿಮ್ ಲೀಗ್ ಕಾರ್ಯಕರ್ತ ಅಸ್ಲಂ ಕೊಲೆಪ್ರಕರಣದಲ್ಲಿ ಸಿಪಿಐಎಂ ಬ್ರಾಂಚ್ ಕಾರ್ಯದರ್ಶಿಯನ್ನು ಪೊಲೀಸರು ಬಂದಿಸಿದ್ದಾರೆಂದು ವರದಿಯಾಗಿದೆ. ಆರೋಪಿಗಳು ಅಡಗಿರಲು ನೆರವಾಗಿದ್ದಕ್ಕಾಗಿ ವೆಙಳಂ ಶಾಖಾ ಕಾರ್ಯದರ್ಶಿ ಅನಿಲ್ ವೆಂಙಳಂ ಎಂಬವನನ್ನು ಕಾಸರಗೋಡು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋಝಿಕ್ಕೋಡ್ ಜಿಲ್ಲಾ ಪೊಲೀಸ್ ಅಧಿಕಾರಿ ನೀಡಿದ ಸೂಚನೆಯಂತೆ ಹೊಸದುರ್ಗ ಎಸ್ಸೈ ಬಿಜಿಲಾಲ್, ಶಾಖಾ ಕಾರ್ಯದರ್ಶಿ ಅನಿಲ್‌ನನ್ನು ಕಸ್ಟಡಿಗೆ ಪಡೆದು, ನಂತರ ಅಸ್ಲಂ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕೊಲೆಗಡುಕ ತಂಡಕ್ಕೆ ಇನ್ನೊವ ಕಾರನ್ನು ನೀಡಿದ್ದ ವ್ಯಕ್ತಿಯನ್ನು ಈಗಾಗಲೇಬಂಧಿಸಲಾಗಿದ್ದು, ಈತ ನೀಡಿದ ಮಾಹಿತಿಯ ಆಧಾರದಲ್ಲಿ ಸಿಪಿಐಎಂ ಶಾಖಾ ಕಾರ್ಯದರ್ಶಿಯನ್ನು ಕಸ್ಟಡಿಗೆ ಪಡೆಯಾಯಿತು ಎನ್ನಲಾಗಿದೆ. ಅಸ್ಲಂ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಕೋಝಿಕ್ಕೋಡ್ ಜಿಲ್ಲೆಯಿಂದ ಹೊರಗೂ ವಿಸ್ತರಿಸಿದ್ದಾರೆಂದು ವರದಿ ತಿಳಿಸಿದೆ.