×
Ad

ಕೇರಳ: ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತನಿಗೆ ಇರಿತ

Update: 2016-08-25 18:05 IST

ಕಣ್ಣೂರು,ಆಗಸ್ಟ್ 25: ಕಣ್ಣೂರಿನಲ್ಲಿ ಅರೆಸ್ಸೆಸ್ ಕಾರ್ಯಕರ್ತನನ್ನು ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ. ಮುಯುಕುನ್ನು ಮಂಡಲಂ ಕಾರ್ಯವಾಹಕ್ ಸುಜೇಶ್‌ರನ್ನು ಇಂದು ಬೆಳಗ್ಗೆ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.ಕೂಡಲೇ ಸುಜೇಶ್‌ರನ್ನು ಕೋಝಿಕ್ಕೋಡ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಸಿಪಿಐಎಂ ಈ ಘಟನೆಯ ಹಿಂದಿದೆ ಎಂದು ಆರೆಸ್ಸೆಸ್ ಆರೋಪಿಸಿದೆ. ಕೆಲವುದಿವಸಗಳಿಂದ ಮುಯುಕುನ್ನು ಮತ್ತು ಸಮೀಪ ಪ್ರದೇಶಗಳಲ್ಲಿ ಘರ್ಷಣೆಯ ಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ ಶ್ರೀಕೃಷ್ಣ ಜಯಂತಿ ಮೆರವಣಿಗೆಯಲ್ಲಿ ಸಣ್ಣಮಟ್ಟದ ಜಗಳ ಆಗಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಸುಜೇಶ್‌ಗೆ ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News