×
Ad

ಸಚಿವ ರಮಾನಾಥ ರೈ ಪ್ರವಾಸ

Update: 2016-08-25 18:50 IST

ಬಂಟ್ವಾಳ, ಆ. 25: ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈರವರ ಆ. 26ರಂದರ ಕಾರ್ಯಕ್ರಮ. ಬೆಳಗ್ಗೆ 9:30ಕ್ಕೆ ಕಕ್ಯಪದವು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗುವ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ. 10:30ಕ್ಕೆ ಮಂಗಳೂರು ಮಹಾ ನಗರಪಾಲಿಕೆಯ ಮಂಗಳ ಸಭಾಂಗಣದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಎಲೆಕ್ಟ್ರಾನಿಕ ತ್ಯಾಜ್ಯಗಳ ಸಂಗ್ರಹಣಾ ಘಟಕಗಳ ಉದ್ಘಾಟನೆ ಮತ್ತು ಎಲೆಕ್ಟ್ರಾನಿಕ ತ್ಯಾಜ್ಯಗಳ ನಿರ್ವಹಣಾ ಕಾರ್ಯಗಾರದ ಉದ್ಘಾಟನಾ ಸಮಾರಂಭ. ಮಧ್ಯಾಹ್ನ 2ಕ್ಕೆ ಸಚಿವರ ಬಿ.ಸಿ.ರೋಡ್ ಕಚೇರಿಯಲ್ಲಿ ಪ್ರಾಕೃತಿ ವಿಕೋಪ ಪರಿಹಾರ ಧನದ ವಿತರಣೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ. ಸಂಜೆ 4ಕ್ಕೆ ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News