ಪುತ್ತೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ವಿಲ್ಮಾ ಗೋನ್ಸಾಲ್ವಿಸ್
Update: 2016-08-25 20:17 IST
ಪುತ್ತೂರು,ಆ.25: ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ವಿಲ್ಮಾ ಗೋನ್ಸಾಲ್ವಿಸ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶಾರದಾ ಅರಸ್, ಜಾನಕಿ ಮುರ, ಚಂದ್ರಾವತಿ ರಾವ್ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಣಾಕ್ಷೆ ಜೆ. ಶೆಟ್ಟಿ, ಝೊಹರಾ ನಿಸಾರ್, ಕಾರ್ಯದರ್ಶಿಗಳಾಗಿ ಪುಷ್ಪಾ ಭಂಡಾರಿ, ರೂಪರೇಖಾ ಆಳ್ವ, ಪ್ರತಿಮಾ ಕೆ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪಾ ಗಂಗಾಧರ್, ಸಿಂತಿಯಾ ಡಿಸೋಜ, ಮೈಮುನಾ, ಖಜಾಂಜಿಯಾಗಿ ರೂಪಾ ದೇವಸ್ಥಾನ ವಠಾರ, ಕಾನೂನು ಸಲಹೆಗಾರರಾಗಿ ಸಾಹಿರಾ ಜುಬೈರ್ ಹಾಗೂ 12 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಯಿತು.