×
Ad

ಕಾಸರಗೋಡು: ಖಾಸಗಿ ಬಸ್ಸು ಮುಷ್ಕರ ಮುಂದೂಡಿಕೆ

Update: 2016-08-25 20:18 IST

ಕಾಸರಗೋಡು,ಆ.25 : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 30 ರಂದು ಕೇರಳ ರಾಜ್ಯವ್ಯಾಪಿ  ನಡೆಸಲುದ್ದೇಶಿಸಿದ್ದ  ಖಾಸಗಿ  ಬಸ್ಸು ಮುಷ್ಕರವನ್ನು   ಮುಂದೂಡಲಾಗಿದೆ. ಗುರುವಾರ ಸಂಜೆ   ರಾಜ್ಯ ಸಾರಿಗೆ ಸಚಿವ ಎ . ಕೆ ಶಶೀ೦ದ್ರನ್ ರವರು 

ಬಸ್ಸು ಮಾಲಕರ  ಸಂಘದ ಪ್ರತಿನಿಧಿಗಳ  ಜೊತೆ ನಡೆಸಿದ ಮಾತುಕತೆ ಹಿನ್ನಲೆಯಲ್ಲಿ  ಮುಷ್ಕರ  ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು .  ರಸ್ತೆ ತೆರಿಗೆ ಏರಿಕೆ  ಮತ್ತು  ಬಸ್ಸು  ಮಾಲಕರ ಎರಡು ಪ್ರಮುಖ ಬೇಡಿಕೆಗಳ ಬಗ್ಗೆ  ಸೆಪ್ಟ೦ಬರ್  ಮೂರರ ಸಮಿತಿ ಸಭೆಯಲ್ಲಿ  ಚರ್ಚಿಸಲಾಗುವುದು ಎಂದು ಸಚಿವರ ಭರವಸೆಯಂತೆ ಮುಷ್ಕರ ಮುಂದೂಡಲು  ಮಾಲಕರ ಸಂಘವು ತೀರ್ಮಾನ ತೆಗೆದುಕೊಂಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News