×
Ad

ಡಾ.ಎಂ ಮೋಹನ ಆಳ್ವರಿಗೆ "ತಿಂಶತಿ ವರ್ಷ ಸಂಭ್ರಮ ಪುರಸ್ಕಾರ-2016" ಪ್ರಧಾನ

Update: 2016-08-25 20:26 IST

ಮೂಡುಬಿದಿರೆ,ಆ.25: ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಗುರುವಾರದಂದು ಕೃಷ್ಣಕಟ್ಟೆಯ ಬಳಿ ನಡೆದ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ 30ನೇ ವರ್ಷದ ಸಾಂಸ್ಕೃತಿಕ ಕಲಾಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರಿಗೆ "ತಿಂಶತಿ ವರ್ಷ ಸಂಭ್ರಮ ಪುರಸ್ಕಾರ-2016"ನ್ನು ಪ್ರಧಾನ ಮಾಡಿ ಗೌರವಿಸಿದೆ.
 ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ.ಆಳ್ವರು ಜೀವನದಲ್ಲಿ ನಾನು ಐಶ್ವರ್ಯ ಹಾಗೂ ಹೆಸರನ್ನು ಹಿಂಬಾಲಿಸಿದವನ್ನಲ್ಲ. ಮೂಡುಬಿದಿರೆಯಂತಹ ಊರನ್ನು ಒಬ್ಬನಿಂದ ಕಟ್ಟಲು ಸಾಧ್ಯವಿಲ್ಲ. ಊರಿನ ಪ್ರತಿಯೊಬ್ಬರು ಸಾಂಘಿಕ ಪ್ರಯತ್ನ, ಸೌಹಾರ್ದತೆಯ ನಡೆಯಿಂದ ಊರನ್ನು ಬೆಳಗಲು ಸಾಧ್ಯ ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಇಬ್ರಾಹಿಂ ಬಾತಿಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಲವಾರು ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಮತ್ತು ಉಡುಗೆ ತೊಡುಗೆಗಳೊಂದಿಗೆ ವೈವಿದ್ಯತೆಯೊಂದಿಗೆ ಏಕತೆಯನ್ನು ಸಾರಿದ ದೇಶ ಭಾರತ. ಆದರೆ ಇಂದು ದೇಶದಲ್ಲಿರುವ ಕೆಲವು ಕುತಂತ್ರಿಗಳಿಂದಾಗಿ ನಾವು ವ್ಯಕ್ತಿತ್ವ ಮತ್ತು ಸೌಹಾರ್ದತೆಯನ್ನು ಕಳೆದುಕೊಳ್ಳುವಂತ್ತಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದ ಅವರು ಸೌಹಾರ್ದ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಹೇಳಿದರು.

ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ್ ಭಟ್, ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ ಪೌಲ್ ಸಿಕ್ವೇರಾ ಶುಭಾಂಶನೆಗೈದರು. ಶ್ರೀಕೃಷ್ಣ ವೇಷಧಾರಿ ಮಳಲಿ ದಿವಾಕರ್ ಕುಲಾಲ್ ಅವರನ್ನು ಗೌರವಿಸಲಾಯಿತು. ಮುದ್ದುಕೃಷ್ಣ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಧನಂಜಯ ಕುಂಬ್ಳೆ ಆಳ್ವರ ಬಗ್ಗೆ ಅಭಿನಂದನಾ ಮಾತುಗಳನ್ನಾಡುತ್ತಾ ನಿಜಾರ್ಥದಲ್ಲಿ ಮೂಡುಬಿದಿರೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವ ಅಪ್ರತಿಮ ಸಾಧಕ ಡಾ.ಎಂ ಮೋಹನ ಆಳ್ವ. ಭವ್ಯ ಕನಸು, ಶಿಸ್ತುಬದ್ಧ ಸಂಘಟನೆ, ಸಮಯಪ್ರಜ್ಞೆ, ಮಾನವ ಸಂಪನ್ಮೂಲವನ್ನು ಸಮರ್ಪಕ ಬಳಕೆ ಮಹತ್ವವನ್ನು ಇಡೀ ನಾಡಿಗೆ ಸಾರಿದವರು ಆಳ್ವರು. ಸರ್ವಧರ್ಮದ ನೆಲದ ಗುಣವನ್ನು ತನ್ನ ನಡೆನುಡಿಯಲ್ಲಿ ಆಚರಿಸುತ್ತಿರುವುದು ಆಳ್ವರ ಹೆಚ್ಚುಗಾರಿಕೆ. ಮೋಹನ ಆಳ್ವರನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಸಾಂಸ್ಕೃತಿಕ ನಿಷ್ಠೆಯನ್ನು ರೂಪಿಸುವ ಅಗತ್ಯತೆಯಿದೆ ಎಂದರು.
ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಬ್ಯಾಂಕ್‌ನ ಎಜಿಎಂ ನಾಗರಾಜ್, ಮೂಡುಬಿದಿರೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಉದ್ಯಮಿಗಳಾದ ದೇವಿ ಪ್ರಸಾದ್ ಶೆಟ್ಟಿ, ಅನಿಲ್ ಸಿಪ್ರಿಯನ್ ಲೋಬೋ, ಐ.ರಾಘವೇಂದ್ರ ಪ್ರಭು, ದಿನೇಶ್ ಕೋಟ್ಯಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್‌ನ ಗೌರವಾಧ್ಯಕ್ಷ ಕೆ.ಶ್ರೀಪತಿ ಭಟ್, ಬಿ. ಜಗನ್ನಾಥ್ ರಾವ್, ಪ್ರಮಥ್ ಕುಮಾರ್ , ಅಧ್ಯಕ್ಷ ಬಿ.ಗಣೇಶ್ ರಾವ್, ಸಂಚಾಲಕ ಸಂತೋಷ್ ಕುಮಾರ್, ಕಾರ್ಯದರ್ಶಿ ಸುದರ್ಶನ್ ಎಂ., ಉಪಾಧ್ಯಕ್ಷಕರಾದ ಸುಶಾಂತ್ ಕರ್ಕೇರಾ, ಭೋಜ ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಜಗದೀಶ್ ಶೆಟ್ಟಿ, ಸತೀಶ್ ಭಂಡಾರಿ, ಕೋಶಾಧಿಕಾರಿ ದಿನಕರ ಶರ್ಮ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಕೆ.ವಿ ರಮಣ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಿಚರ್ಡ್ ಲೂಯಿಸ್ ಹಾಸ್ಯೋತ್ಸವ ಹಾಗೂ ನಾಟ್ಯನಿಲಯಂ ಬಿ.ಬಾಲಕೃಷ್ಣ ಮಂಜೇಶ್ವರ ತಂಡದಿಂದ ನಾಟ್ಯ ನೀರಾಜನಂ 2016 ನೃತ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News