×
Ad

ರಾಜನ್- ಸುಬ್ರಹ್ಮಣ್ಯನ್ ಭಾರತಕ್ಕೆ ಅಮೆರಿಕದ ಹೇರಿಕೆ: ಸ್ವಾಮಿ ಟೀಕೆ

Update: 2016-08-25 23:05 IST

ಹೊಸದಿಲ್ಲಿ, ಆ.25: ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್‌ರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸುಬ್ರಮಣಿಯನ್ ಸ್ವಾಮಿ, ಅವರನ್ನು ‘ಅಲ್ಪ ಬುದ್ಧಿಯ’ ಮ್ಯಾನೇಜ್ಮೆಂಟ್ ಪದವೀಧರರು ಹಾಗೂ ಅಮೆರಿಕವು ಉತ್ತಮವೆಂದಿರುವ ಖೋಟಾ ಮಾಲುಗಳಾಗಿದ್ದಾರೆಂದು ಟೀಕಿಸಿದ್ದಾರೆ.
ಈ ಹಿಂದೆ ಬೆಳವಣಿಗೆಯನ್ನು ಉತ್ತೇಜಿಸಲು ಬಡ್ಡಿದರಗಳನ್ನು ಇಳಿಸದುದಕ್ಕಾಗಿ ರಾಜನ್‌ರನ್ನು ಟೀಕಿಸಿದ್ದ ಸ್ವಾಮಿ, ಔಷಧೋತ್ಪನ್ನಗಳ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್) ನಿಯಂತ್ರಣಗಳ ಕುರಿತಾಗಿ ಭಾರತದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಯ(ಡಬ್ಲುಟಿಒ) ಮೂಲಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸರಕಾರಕ್ಕೆ ಶಿಫಾರಸು ಮಾಡಿದ್ದ 2013ರ ನಿಲುವಿನ ಕುರಿತಾಗಿ ಅರವಿಂದ್‌ರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಘುರಾಮ ರಾಜನ್(ಆರ್‌ಬಿಐ) ಹಾಗೂ ಅರವಿಂದ ಸುಬ್ರಹ್ಮಣ್ಯನ್‌ರಂತಹ(ಎಎಸ್) ಮ್ಯಾನೇಜ್ಮೆಂಟ್ ಪದವಿಧರರನ್ನು ಅಮೆರಿಕನ್ನರು ನಮ್ಮ ಮೇಲೆ ಹೇರಿದ್ದಾರೆ. ಅವರ ಮ್ಯಾನೇಜ್ಮೆಂಟ್ ಅತಿ ಸಣ್ಣ ಮನಸ್ಸಿನದಾಗಿದ್ದರೆ, ಆರ್ಥಿಕತೆ ಸಾಮಾನ್ಯ ಜಡವಾಗಿದೆಯೆಂದು ಸ್ವಾಮಿ ಇಂದು ಟ್ವೀಟಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News