×
Ad

ಮಂಗಳೂರು: ರಮ್ಯಾ ಇದ್ದ ವೇದಿಕೆಗೆ ಕಲ್ಲು, ಶೂ ಎಸೆತ

Update: 2016-08-25 23:30 IST

ಮಂಗಳೂರು, ಆ. 25: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕದ್ರಿ ಕ್ರಿಕೆಟರ್ಸ್‌ ವತಿಯಿಂದ ಇಂದು ರಾತ್ರಿ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಅವರು ವೇದಿಕೆಯಲ್ಲಿ ಆಸೀನರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಶೂ ಮತ್ತು ಕಲ್ಲು ಎಸೆದ ಘಟನೆ ನಡೆದಿದೆ.

‘ಮಂಗಳೂರನ್ನು ನರಕ’ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಮ್ಯಾ ಅವರು ಉಪಸ್ಥಿತರಿದ್ದ ವೇದಿಕೆಯ ಮೇಲೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ರಮ್ಯಾರನ್ನು ಬೀಳ್ಕೊಟ್ಟರು. ವೇದಿಕೆಯಲ್ಲಿ ಸಚಿವರು ಕೂಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News