ಪ್ರೇಗ್ ನಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಕೊಲೆ ಯತ್ನ
ಬರ್ಲಿನ್, ಆ.26: ಪ್ರೇಗ್ ನಲ್ಲಿ ಜರ್ಮನಿ ಚಾನ್ಸಲರ್ ಏಂಜೆಲ್ ಮೊರ್ಕೆಲ್‌ರನ್ನು ಕೊಲೆ ನಡೆಸಲು ವಿಫಲ ಯತ್ನ ನಡೆಸಲಾಗಿದ್ದು, ಝೆಕ್ ಪೊಲೀಸರು ಶಸ್ತ್ರಸಜ್ಜಿತ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರೇಗ್ ನಲ್ಲಿರುವ ಜರ್ಮನಿ ಚಾನ್ಸಲರ್ ಏರ್‌ಪೋರ್ಟ್‌ನಿಂದ ಝೆಕ್ ಪ್ರಧಾನಮಂತ್ರಿ ಬೊಹುಸ್ಲಾವ್ ಸೊಬೊಕಾರನ್ನು ಭೇಟಿಯಾಗಲು ಬೆಂಗಾವಲಿನ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಶಂಕಿತ ಕಪ್ಪು ಬಣ್ಣದ ಮರ್ಸಿಡೆಸ್ ಕಾರು ಪ್ರತ್ಯಕ್ಷವಾಗಿದೆ. ಜರ್ಮನಿ ಚಾನ್ಸಲರ್ ಜೊತೆ ಬರುತ್ತಿದ್ದ ಪೊಲೀಸರ ಆದೇಶವನ್ನು ಲೆಕ್ಕಿಸದೇ ಮರ್ಸಿಡೆಸ್ ಕಾರು ಚಾಲಕ ಚಾನ್ಸಲರ್ ಪ್ರಯಾಣಿಸುತ್ತಿದ್ದ ಕಾರಿನತ್ತ ಪ್ರವೇಶಿಸಲು ಯತ್ನಿಸಿದ. ಆಗ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಶಂಕಿತ ವ್ಯಕ್ತಿಯಿದ್ದ ಕಾರನ್ನು ತಡೆ ಹಿಡಿದರು. ಪೊಲೀಸರು ಶೂಟೌಟ್ ಮಾಡುವ ಬೆದರಿಕೆ ಹಾಕಿದ ಬಳಿಕ ವಾಹನ ನಿಲ್ಲಿಸಿದ ಆ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆಯ ಬಗ್ಗೆ ಪ್ರೇಗ್ ಪತ್ತೆ ದಳ ತೀವ್ರ ತನಿಖೆ ನಡೆಸುತ್ತಿದೆ. ಹಿಂಸಾಚಾರ ಸೃಷ್ಟಿಸಲು ಇಂತಹ ಯತ್ನ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಯುರೋಪ್‌ನಲ್ಲಿ ಕಳೆದ ಒಂದು ವರ್ಷಗಳಿಂದ ಸರಣಿ ಭಯೋತ್ಪಾದಕದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.