ರಿಯೋ ಒಲಿಂಪಿಕ್ಸ್ ನಲ್ಲಿ ಮಿಂಚಿದ ಮುಸ್ಲಿಮ್ ಮಹಿಳೆಯರು

Update: 2016-08-26 09:31 GMT

ರಿಯೋ ಡಿ ಜನೈರೋ,ಆ.26 : ರಿಯೋ ಒಲಿಂಪಿಕ್ಸ್ ಮುಗಿದಿದೆ. ಹಲವು ದಾಖಲೆಗಳು ಸೃಷ್ಟಿಯಾಗಿವೆ. ಹಲವು ಆಟಗಾರರು ಮಹೋನ್ನತ ಸಾಧನೆ ಮಾಡಿದ್ದಾರೆ. ಇವೆಲ್ಲವುಗಳ ನಡುವೆ ಕೆಲ ಮುಸ್ಲಿಮ್ ಮಹಿಳಾಕ್ರೀಡಾಪಟುಗಳೂ ತಮ್ಮ ಸಾಧನೆ ಮೂಲಕ ಒಲಿಂಪಿಕ್ಸ್ ನಲ್ಲಿ ಮಿಂಚಿದ್ದಾರೆ.

ಈ ಮುಸ್ಲಿಮ್ ಕ್ರೀಡಾ ಸಾಧಕಿಯರು ಯಾರೆಂದು ಗೊತ್ತೇ ? ಇಲ್ಲಿವೆ ಅವರ ವಿವರ : ದಲೀಲ ಮುಹಮ್ಮದ್400 ಮೀಟರ್ಸ್‌ ಹರ್ಡಲ್ಸ್ ನಲ್ಲಿ ಚಿನ್ನ ಗೆದ್ದರೆ, ಮಜ್ಲಿಂದಾ ಕಲ್ಮಂದಿ ಜೂಡೋದಲ್ಲಿ ಚಿನ್ನ ಪಡೆದಿದ್ದಾರೆ. 21 ವರ್ಷದ ಆಲಿಯಾ ಮುಸ್ತಾಫೀನಾ ಅನ್ ಈವನ್ ಬಾರ್ಸ್‌ ವಿಭಾಗದಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ ಹಾಗೂ ಒಟ್ಟಾರೆ ತಂಡ ನಿರ್ವಹಣೆಯಲ್ಲಿ ಬೆಳ್ಳಿ ಪದಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಅಂತೆಯೇ ಮರಿಯಾ ಸ್ಟಾನಿಕ್ ಕುಸ್ತಿಯಲ್ಲಿ, ಝಝೀರಾ ಝಪರ್ ಕುಲ್ ಗೂ ಮತ್ತು ಶ್ರೀ ವಯೂನಿ ಅಗಸ್ಟಿಯಾನಿ ವೈಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಪಡೆದವರು.

ಹಿಜಾಬ್ ಧರಿಸಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಪ್ರಥಮ ಅಮೇರಿಕನ್ ಮುಸ್ಲಿಮ್ ಮಹಿಳೆ ಇಬ್ತಿಹಾಜ್ ಮೊಹಮ್ಮದ್ ಫೆನ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸಾರಾ ಅಹಮದ್ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಹಾಗೂ ಕಿಮಿಯಾ ಅಲಿಝುದೆಹ್ ಝೆನೂರೈನ್ ಟಯೇಕ್ವೊಂಡೋದಲ್ಲಿ ಕಂಚು ಪಡೆದಿದ್ದಾರೆ.

23 ವರ್ಷದ ಈಜಿಪ್ಟ್ ಆಟಗಾರ್ತಿ ಹಿದಾಯಾ ವಹ್ಬಾ ಕೂಡ ಟಯೇಕ್ವೊಂಡೋದಲ್ಲಿ ಕಂಚು ಗೆದ್ದಿದ್ದಾರೆ. ಈ ವಿಭಾಗದಲ್ಲಿ ಕಂಚು ಗೆದ್ದ ಇನ್ನೊಬ್ಬ ಆಟಗಾರ್ತಿ ಪಾಕಿಮತ್ ಅಬೂಬಕರೋವಾ ಆಗಿದ್ದರೆ, ಐನಿಸ್ ಬೂಬಕಿ ಫೆನ್ಸಿಂಗ್ ನಲ್ಲಿ ಕಂಚು ಗೆದ್ದಿದ್ದಾರೆ.

ಟುನೀಷ್ಯಾದ ಮರ್ವಾ ಅಮ್ರಿ ಮಹಿಳೆಯರ ಕುಸ್ತಿಯಲ್ಲಿ ಪ್ರಥಮವಾಗಿ ಒಲಂಪಿಕ್ ಕಂಚು ಪದಕ ಪಡೆದವರು,ಟಯೇಕ್ವೊಂಡೋದಲ್ಲಿ ನೂರ್ ತಾತರ್ ಬೆಳ್ಳಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News