×
Ad

ಕೇರಳ ಬೌಲರ್‌ಗಳಿಗೆ ಆಸ್ಟ್ರೇಲಿಯದ ಮಾಜಿ ವೇಗಿ ಥಾಮ್ಸನ್ ತರಬೇತಿ

Update: 2016-08-26 15:01 IST

 ಕೊಚ್ಚಿ, ಆ.26: ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಉದಯೋನ್ಮುಖ ವೇಗದ ಬೌಲರ್‌ಗಳಿಗೆ ತರಬೇತಿ ನೀಡಲು ಆಸ್ಟ್ರೇಲಿಯದ ಮಾಜಿ ವೇಗಿ ಜೆಫ್ ಥಾಮ್ಸನ್ ಅವರೊಂದಿಗೆ ಕೇರಳ ಕ್ರಿಕೆಟ್ ಅಸೋಸಿಯೇಶನ್(ಕೆಸಿಎ) ಒಪ್ಪಂದ ಮಾಡಿಕೊಂಡಿದೆ.

ಪ್ರತಿ ತಿಂಗಳು 15 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ ಸೆ.1 ರಿಂದ 15ರ ತನಕ ನಡೆಯಲಿದೆ. ಹಾಲಿ ರಾಜ್ಯದ ಆಟಗಾರರು ಹಾಗೂ ಹೊಸ ಪ್ರತಿಭೆಗಳು ಸೇರಿದಂತೆ ಆಯ್ದ ಆಟಗಾರರು ತರಬೇತಿಗೆ ಆಯ್ಕೆಯಾಗಲಿದ್ದಾರೆ ಎಂದು ಕೆಸಿಎ ಅಧಿಕಾರಿಗಳು ತಿಳಿಸಿದ್ದಾರೆ.

‘‘ಥಾಮ್ಸನ್ ಸೋಮವಾರ ಕೊಚ್ಚಿಗೆ ಆಗಮಿಸಲಿದ್ದು, ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಮುಂದಿನ ತಿಂಗಳು ವಯನಾಡ್‌ನಲ್ಲಿ ವೇಗದ ಬೌಲರ್‌ಗಳಿಗೆ ತರಬೇತಿ ಶಿಬಿರ ಆರಂಭವಾಗಲಿದ್ದು, ಥಾಮ್ಸನ್ ಅಲ್ಲಿಗೆ ತೆರಳಲಿದ್ದಾರೆ. ಐಡಿಬಿಐ-ಫೆಡರಲ್ ಬ್ಯಾಂಕ್ ಪೇಸ್ ಫೌಂಡೇಶನ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’’ ಎಂದು ಕೆಸಿಎ ಅಧ್ಯಕ್ಷ ಟಿ.ಸಿ.ಮ್ಯಾಥ್ಯೂ ತಿಳಿಸಿದ್ದಾರೆ.

ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್‌ಗೆ ಭಾರತದ ಮಾಜಿ ಆಟಗಾರರಾದ ಟಿನೂ ಯೋಹಾನನ್, ರಮೇಶ್ ಪವಾರ್ ಮತ್ತಿತರರು ನೆರವು ನೀಡಲಿದ್ದಾರೆ. ಥಾಮ್ಸನ್ 1972 ಹಾಗೂ 1985ರ ನಡುವೆ ಆಸ್ಟ್ರೇಲಿಯದ ಪರ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 200 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಡೆನ್ನಿಸ್ ಲಿಲ್ಲಿಯೊಂದಿಗೆ ವೇಗದ ಬೌಲಿಂಗ್ ದಾಳಿ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News