ಬಿ.ಕೆ.ಜಬ್ಬಾರ್‌ಗೆ ಕತರ್‌ನಲ್ಲಿ ಸನ್ಮಾನ
Update: 2016-08-26 16:05 IST
ಕತರ್, ಆ.26: ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಬಿ.ಕೆ.ಅಬ್ದುಲ್ ಜಬ್ಬಾರ್ ಬೋಳಿಯಾರ್‌ರನ್ನು ಕತರ್ ಕೆಸಿಎಫ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭ ತಲೆಕ್ಕಿ ಮಸ್ಹೂರ್ ತಂಙಳ್‌ರನ್ನು ಕೂಡಾ ಸನ್ಮಾನಿಸಲಾಯಿತು. ಕತರ್‌ನಲ್ಲಿ ನಡೆದ ಈ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಕೆಸಿಎಫ್ ಕತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಫಿಳ್ ಫಾರೂಕ್ ಸಖಾಫಿ ಎಮ್ಮೆಮಾಡು ವಹಿಸಿದ್ದರು. ಆಯೋಜಕರಾದ ಅಶ್ರಫ್ ಮುಡಿಪು, ಕೆಸಿಎಫ್ ನಾಲೇಜ್ ಡಿವಿಶನ್ ಕಾರ್ಯದರ್ಶಿ ಹನೀಫ್ ಪಾತೂರು, ಫಾರೂಕ್ ಕೃಷ್ಣಾಪುರ, ಮುಸ್ತಫಾ ಬ್ರದರ್ಸ್ ಮೊದಲಾದವರು ಉಪಸ್ಥಿತರಿದ್ದರು.