×
Ad

ತೆಂಕಮಿಜಾರಿನಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

Update: 2016-08-26 18:03 IST

ಮೂಡುಬಿದಿರೆ, ಆ.26: ಲಯನ್ಸ್ ಕ್ಲಬ್ ತೋಡಾರು-ಮಿಜಾರು ಮತ್ತು ತೆಂಕಮಿಜಾರು ಗ್ರಾಮ ಪಂಚಾಯತ್ ನೀರ್ಕೆರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಲ್ಲಮುಂಡ್ಕೂರು ಇದರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಜಿಲ್ಲಾ ವೆನ್ಲಾಕ್ ಸಂಚಾರಿ ನೇತ್ರ ಘಟಕ ಮತ್ತು ಕೆಎಂಸಿ ಮಂಗಳೂರು ಇದರ ತಜ್ಞ ವೈದ್ಯರಿಂದ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರವು ನೀರ್ಕೆರೆ ತೆಂಕಮಿಜಾರು ಗ್ರಾ.ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಲಯನ್ಸ್ ಕ್ಲಬ್‌ನ ಅಧ್ಯಕ್ಷ ಗಣೇಶ್ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, 2017ರ ಅಂತ್ಯದ ಮೊದಲು ದೃಷ್ಟಿ ದೋಷದಿಂದ ದೇಶದಲ್ಲಿ ಬಳಲುತ್ತಿರುವ ಕನಿಷ್ಠ 1,21,575 ಮಂದಿಗೆ ಚಿಕಿತ್ಸೆ ನೀಡುವ ಮಹತ್ತರ ಉದ್ದೇಶವನ್ನು ಲಯನ್ಸ್ ಕ್ಲಬ್ ಹೊಂದಿದೆ. 23,555 ರೋಗಿಗಳಿಗೆ ಕಾಂಟಾಕ್ಟ್ ಲೆನ್ಸ್ ಹಾಗೂ 20,660 ರೋಗಿಗಳಿಗೆ ಅಂಧತ್ವ ನಿವಾರಣೆಗೆ ಪಣ ತೊಟ್ಟು ನಿಂತಿದೆ ಎಂದು ಹೇಳಿದ ಅವರು, ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಭಾರತವು ಈ ವರ್ಷದಲ್ಲಿ 5,376 ಲಕ್ಷ ರೂ. ಅನುದಾನವನ್ನು ಪಡೆದಿದ್ದು, ಅದರಲ್ಲಿ 228 ಲಕ್ಷ ರೂ.ನ್ನು ಕೇವಲ ಅಂಧತ್ವ ನಿವಾರಣೆಗಾಗಿ ವಿನಿಯೋಗಿಸಿದೆ ಎಂದು ತಿಳಿಸಿದರು.

ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇತ್ರಾಧಿಕಾರಿ ಡಾ.ಸವಿತಾ ಮಾತನಾಡಿ, ಕಣ್ಣಿನ ಪೊರೆ ರೋಗವು ಕುರುಡುತನಕ್ಕೆ ಕಾರಣವಾಗುತ್ತದೆ. ಜಿಲ್ಲಾ ಸಂಚಾರಿ ನೇತ್ರ ಘಟಕದಲ್ಲಿ ಯಾವುದೇ ತರಹದ ನೋವಿಲ್ಲದೆ ಕಣ್ಣಿನ ಪೊರೆಯನ್ನು ತೆಗೆಯಲು ಅವಕಾಶವಿದ್ದು ಫಲಾನುಭವಿಗಳು ಪ್ರಯೋಜನವನ್ನು ಶಿಬಿರದ ಮೂಲಕ ಪಡೆದುಕೊಳ್ಳಬೇಕೆಂದರು.

ಪಿಡಿಒ ಸಾಯೀಶ ಚೌಟ, ಡಾ.ಟೀನಾ, ಡಾ.ಜಯಂತಿ ಉಪಸ್ಥಿತರಿದ್ದರು. ಗ್ರಾ.ಪಂ ಮತ್ತು ಲಯನ್ಸ್ ಸದಸ್ಯ ರಮೇಶ್ ಶೆಟ್ಟಿ ಸ್ವಾಗತಿಸಿ ವಿವಿಧ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಸಂಚಲನ ಮೂಡಿಸಿದಾಗ ಕೆಲಸಗಳು ಕಾರ್ಯರೂಪಕ್ಕೆ ಬರುತ್ತವೆ ಎಂದರು. ಗ್ರಾ.ಪಂ. ಸಿಬ್ಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News