ಪಿ.ಎ.ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ
ಕೊಣಾಜೆ, ಆ.26: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆಂಟರ್ ಫಾರ್ ಪ್ರೊಪೆಷನಲ್ ಆಂ್ಯಡ್ ಆರ್ಗನೈಷೇಶನಲ್ ಡೆವಲಪ್‌ಮೆಂಟ್‌ಘಟಕದ ಆಶ್ರಯದಲ್ಲಿ ಬೋಧಕ ಸಿಬ್ಬಂದಿ ವರ್ಗದವರಿಗೆ ಒಂದು ದಿನದ ಬೋಧನಾ ಕೌಶಲ್ಯ ತರಬೇತಿ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಅಬೇಲಿಯನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ನಿಝಾಮ್ ಎ.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಆರ್ಗನೈಸಿಂಗ್ ಆ್ಯಂಡ್ ಲರ್ನಿಂಗ್ ಮತ್ತು ಲರ್ನಿಂಗ್ ಫಾರ್ ಟೀಚಿಂಗ್ ಎಂಬ ವಿಷಯದಲ್ಲಿ ತರಬೇತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಬೋಧಕರು ಮತ್ತು ಶಿಕ್ಷಣ ತಜ್ಞರು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ನಿರತರಾಗಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು. ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಉಪಸ್ಥಿತರಿದ್ದರು.
ಪ್ರೊ. ಹಬೀಬ್ ಸ್ವಾಗತಿಸಿ, ಪ್ರೊ. ಸರ್ಫರಾಝ್ ಹಾಶಿಂ ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶೀತಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ರಶಲ್ ಸರ್ಕಾರ್ ವಂದಿಸಿದರು.