×
Ad

1ಕೆ.ಜಿ.ಈರುಳ್ಳಿಗೆ 50ಪೈಸೆ ಕಣ್ಣೀರಿಟ್ಟ ರೈತರು!

Update: 2016-08-26 22:36 IST

 ನಾಸಿಕ್,ಆ.26: ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸರಿಯಾದ ಧಾರಣೆ ಸಿಗುತ್ತಿಲ್ಲ ಎಂದು ನಾಸಿಕ್‌ನ ರೈತರು ಹೇಳುತ್ತಿದ್ದಾರೆ. ಒಂದು ಕೆ.ಜಿ. ಈರುಳ್ಳಿಗೆ ಐವತ್ತು ಪೈಸೆ ಮಾತ್ರ ದರ ನಿಗದಿಪಡಿಸಲಾಗಿದೆ ಎಂದು ನಾಸಿಕ್ ಜಿಲ್ಲೆಯ ಸುಧಾಕರ್ ದರಾದೆ ಎಂಬ ರೈತ ಆರೋಪಿಸಿದ್ದಾರೆ. ಕೃಷ್ಯುತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಒಂದು ಕ್ವಿಂಟಾಲ್ ಈರುಳ್ಳಿಗೆ ಐನೂರು ರೂಪಾಯಿ ಬೆಲೆ ನಿಗದಿಪಡಿಸಿದೆ ಎಂದಿರುವ ಅವರು ಹತ್ತು ಎಕರೆಯಲ್ಲಿ ಕೃಷಿ ಮಾಡಿರುವ ತನಗೆ ಒಂದು ಎಕರೆಗೆ ಏಳುನೂರು ರೂಪಾಯಿಗಿಂತಲೂ ಹೆಚ್ಚು ಖರ್ಚಾಗಿದೆ ಎಂದು ಅಲವತ್ತುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈರುಳ್ಳಿಯನ್ನು ಮಾರುಕಟ್ಟೆಗೆ ತರುವ ವಾಹನಕ್ಕೆ 780 ರೂಪಾಯಿ ಖರ್ಚಾಗಿದೆ. ಆದ್ದರಿಂದ 13 ಕ್ಷಿಂಟಾಲ್ ಈರುಳ್ಳಿ ಮಾರಿದರೆ ಮನೆಗೆ ಒಯ್ಯಲು ಕೇವಲ 65 ರೂಪಾಯಿ ಮಾತ್ರ ದೊರಕಿದೆ. ಇದನ್ನು ಪ್ರತಿಭಟಿಸಿ ಎಲ್ಲ ಈರುಳ್ಳಿಯನ್ನು ಗದ್ದೆಗೆ ಸುರಿದೆ ಎಂದು ಅವರು ತಿಳಿಸಿದ್ದಾರೆಂದು ವರದಿ ತಿಳಿಸಿದೆ. ಗುಣಮಟ್ಟವಿಲ್ಲದ ಸಣ್ಣಗಾತ್ರದ ಈರುಳ್ಳಿ ಅವರದ್ದೆಂದು ಎಪಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಕ್ವಿಂಟಾಲ್‌ಗೆ 600-700 ರೂಪಾಯಿ ದರದಲ್ಲಿ ಈರುಳ್ಳಿಯನ್ನು ಸಂಗ್ರಹಿಸಲಾಗುತ್ತಿದೆ. ರೈತರು ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಮಾರುಕಟ್ಟೆಗೆ ಒದಗಿಸುತ್ತಿರುವುದರಿಂದ ಬೆಲೆಕುಸಿತ ಸಮಸ್ಯೆ ಸೃಷ್ಟಿಯಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ಬೆಟ್ಟುಮಾಡಿದ್ದಾರೆ. ಉತ್ಪಾದನೆ ಖರ್ಚಿಗಿಂತ ಕಡಿಮೆ ಬೆಲೆಯಲ್ಲಿ ಈರುಳ್ಳಿ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ರೈತರಿಗೆ ಸಹಾಯಕ ಆಗುವ ರೀತಿಯಲ್ಲಿ ಈರುಳ್ಳಿ ಬೆಲೆಯನ್ನು ಕ್ವಿಂಟಾಲ್‌ಗೆ 2,000 ರೂಪಾಯಿಗೇರಿಸಬೇಕೆಂದು ಎನ್‌ಸಿಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ. ಏಷ್ಯಾದಲ್ಲೆ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ನಾಸಿಕದಲ್ಲಿರುವುದಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News