ನಾಳೆ ಉಚಿತ ಮಧುಮೇಹ ತಪಾಸಣಾ ಶಿಬಿರ
Update: 2016-08-27 00:08 IST
ಮಂಗಳೂರು, ಆ.26: ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಉಚಿತ ಮಧುಮೇಹ ತಪಾಸಣಾ, ಆರೋಗ್ಯ ಮತ್ತು ರಕ್ತದಾನ ಹಾಗೂ ರಕ್ತ ವರ್ಗೀಕರಣ ಶಿಬಿರವನ್ನು ಆ.28ರಂದು ಪೂರ್ವಾಹ್ನ 9ರಿಂದ 1ರವರೆಗೆ ಗುರುಪುರ ಕೈಕಂಬದ ಪೊಂಪೈ ಸ್ಕ್ವೇರ್‌ನಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಕಾರಿ ಡಾ.ಸತೀಶ್ ಶಂಕರ ಬಿ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.