×
Ad

ಪಂಪ್‌ವೆಲ್: ಗ್ಯಾಸ್ ಸೋರಿಕೆಯಿಂದ ಕ್ಯಾಂಟೀನ್ ಬೆಂಕಿಗಾಹುತಿ

Update: 2016-08-27 09:57 IST

ಮಂಗಳೂರು, ಆ.27: ಗ್ಯಾಸ್ ಸೋರಿಕೆಯಿಂದಾಗಿ ಕ್ಯಾಂಟೀನೊಂದು ಬೆಂಕಿಗಾಹುತಿಯಾದ ಘಟನೆ ನಗರದ ಪಂಪ್‌ವೆಲ್ ಸರ್ಕಲ್ ಬಳಿ ಸಂಭವಿಸಿದೆ.

ಇಲ್ಲಿನ ಪ್ರಶಾಂತ್ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 6:30ರ ಸುಮಾರಿಗೆ ಗ್ಯಾಸ್ ಸೋರಿಕೆಯಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಿಂದಾಗಿ ಕ್ಯಾಂಟೀನ್‌ನ ಛಾವಣಿಯ ಹೆಂಚುಗಳು ಹಾನಿಗೀಡಾಗಿವೆ. ಈ ಕ್ಯಾಂಟೀನ್‌ನ ಪಕ್ಕದಲ್ಲೇ ಇರುವ ವಿಶ್ವಜೀತ್ ವೈನ್ಸ್ ಎಂಬ ವೈನ್‌ಶಾಪ್‌ಗೆ ಕೂಡಾ ಅಲ್ಪಪ್ರಮಾಣದಲ್ಲಿ ಸಂಭವಿಸಿದೆ. ಘಟನೆಯಿಂದಾಗಿ 1.75 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿಯನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆರ್‌ಎಫ್‌ಒ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಎರಡು ಅಗ್ನಿಶಾಮಕ ವಾಹನಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News