ಆಲಂಕಾರು: ಕಾರು ಪಲ್ಟಿ; ಪ್ರಯಾಣಿಕರು ಪಾರು
Update: 2016-08-27 10:41 IST
ಕಡಬ, ಆ.27: ಇಲ್ಲಿನ ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ಕಡಬದ ವಕೀಲ ಪ್ರಶಾಂತ್ ಪಂಜೋಡಿ ಎಂಬವರಿಗೆ ಸೇರಿದ ಡಸ್ಟರ್ ಕಾರು ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಪ್ರಶಾಂತ್ ಪಂಜೋಡಿ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.