ವಿಶ್ವಾಸ್ ಬಾವ ಬಿಲ್ಡರ್ಸ್‌ನ ‘ವಿಶ್ವಾಸ್ ನೇಹ ರೆಸಿಡೆನ್ಸಿ’ ಉದ್ಘಾಟನೆ
ಮಂಗಳೂರು, ಆ.26: ವಿಶ್ವಾಸ್ ಬಾವ ಬಿಲ್ಡರ್ಸ್‌ನಿಂದ ನಗರದ ಪಂಪ್‌ವೆಲ್‌ನ ನಿರ್ಮಲ ಸರ್ವಿಸ್ ಸ್ಟೇಷನ್ ಹಿಂದೆ ನಿರ್ಮಾಣಗೊಂಡ ‘ವಿಶ್ವಾಸ್ ನೇಹ ರೆಸಿಡೆನ್ಸಿ’ಯನ್ನು ಇಂದು ಉದ್ಘಾಟಿಸಲಾಯಿತು.
ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ, ಭಾಗೀರಥಿ, ಸಿ.ಎ. ಜಮೀರ್ ಅಹ್ಮದ್ ಅವರು ವಿಶ್ವಾಸ್ ನೇಹ ರೆಸಿಡೆನ್ಸಿಯನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಡದ ಲಾಬಿಯನ್ನು ಆಸರೆ ವುಮೆನ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷೆ ಶಬೀನ ಅಖ್ತರ್, ಫ್ಲ್ಯಾಟ್ ಮಾಲಕರಾದ ಲೀನಾ ಕ್ರಾಸ್ತಾ, ಡಾ.ಸಹನಾ ಉದ್ಘಾಟಿಸಿದರು.
ಕಟ್ಟಡದ ಲಿಫ್ಟ್ ವ್ಯವಸ್ಥೆಯನ್ನು ಫ್ಲ್ಯಾಟ್ ಮಾಲಕರಾದ ಡಾ.ಲಕ್ಷ್ಮೀಪತಿ, ಸುಶ್ರತ್ ಮತ್ತು ಸುಧಾಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಾಸ್ ಎಸ್ಟೇಟ್ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಬಾವ ಬಿಲ್ಡರ್ಸ್‌ನ ಪಾಲುದಾರ ಅಶ್ರಫ್ ಜಿ.ಬಾವ, ಭೂಮಾಲಕ ಪ್ರಕಾಶ್ ಮಾರ್ಲಡಿ, ಪ್ರಪುಲ್ಲ ಮತ್ತು ನೇಹ ಆರ್ಕಿಟೆಕ್ಟ್‌ನ ದಾಮೋದರ ಶೆಣೈ ಉಪಸ್ಥಿತರಿದ್ದರು.
ವಿಶ್ವಾಸ್ ಬಾವ ಬಿಲ್ಡರ್ಸ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುರ್ರವೂಫ್ ಪುತ್ತಿಗೆ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.