×
Ad

‘ವಿಶ್ವಾಸ್ ಅನ್ಮೋಲ್’ ವಸತಿ ಸಮುಚ್ಚಯ ಉದ್ಘಾಟನೆ

Update: 2016-08-27 14:30 IST

ಮಂಗಳೂರು, ಆ.27: ನಗರದ ಕದ್ರಿ ಕೆಪಿಟಿ ಬಳಿ ವಿಶ್ವಾಸ್ ಬಾವ ಬಿಲ್ಡರ್‌ನಿಂದ ನಿರ್ಮಾಣವಾದ ವಿಶ್ವಾಸ್ ಅನ್ಮೋಲ್ ವಸತಿ ಸಮುಚ್ಚಯವನ್ನು ಬಿಜೈ ಚರ್ಚ್ ಫಾದರ್ ವಿಲ್ಸನ್ ವೈಟನ್ ಡಿಸೋಜ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಮನೆ ಕಟ್ಟುವುದು ತುಂಬ ಕಷ್ಟ. ಇಂತಹದರಲ್ಲಿ ಉತ್ತಮ ಗುಣಮಟ್ಟದಲ್ಲಿ ಕಡಿಮೆ ದರದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮಹಾಬಲ ಮಾರ್ಲ, ನಗರದಲ್ಲಿ ವಾಸಿಸುವ ಜನರಿಗೆ ಸ್ವಂತ ಮನೆಯ ಕನಸನ್ನು ನನಸು ಮಾಡುತ್ತಿರುವ ವಿಶ್ವಾಸ್ ಬಾವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ಲಾಮ ಬಿಲ್ಡರ್ ಮಾಲಕ ಅಬ್ದುರ್ರಝಾಕ್ ಮಾತನಾಡಿ, ದೇಶದಲ್ಲಿ 20 ಕೋಟಿ ಜನರಿಗೆ ಮನೆ ಇಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿಶ್ವಾಸ್ ಬಾವ ಬಿಲ್ಡರ್‌ನಿಂದ ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣದ ಕಾರ್ಯವಾಗುತ್ತಿದೆ. ಮಧ್ಯಮವರ್ಗದವರಿಗೆ ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣ ಮಾಡಬೇಕಾದ ಸರಕಾರದ ಕೆಲಸವನ್ನು ವಿಶ್ವಾಸ್ ಬಾವ ಬಿಲ್ಡರ್ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಾಸ್ ಬಾವ ಬಿಲ್ಡರ್ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುರ್ರವೂಫ್ ಪುತ್ತಿಗೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯೆ ಆಶಾ ಡಿಸಿಲ್ವ, ಉದ್ಯಮಿ ಆಲಿನ್ ಡಿಸಿಲ್ವಾ, ಭೂಮಾಲಕ ಶೇಕ್ ಅಬ್ದುಲ್ ಮಜೀದ್ ಬೆಳುವಾಯಿ, ಉದ್ಯಮಿ ವಿಲಿಯಂ, ಸಿ.ಎ. ನಿತಿನ್ ಶೆಟ್ಟಿ, ಉದ್ಯಮಿ ವೇಣುಗೋಪಾಲ ಪುತ್ರನ್, ನಿವೃತ್ತ ಪ್ರೊ. ಡಾ.ಶ್ರೀಪತಿ ರಾವ್ , ಬ್ಯಾಂಕ್ ಅಫ್ ಬರೋಡದ ಮೆನೇಜರ್ ನಾಗೇಶ್ವರ ರಾವ್, ಸಾಮ್ರಾಟ್ ಫ್ಲಾಟ್ ಓನರ್ ಅಸೋಸಿಯೇಶನ್‌ನ ಅಧ್ಯಕ್ಷ ಯೋಗೀಶ್, ವಿಶ್ವಾಸ್ ಆಶಾಕಿರಣ್ ಅಧ್ಯಕ್ಷೆ ಶಾಲಿನಿ, ಉದ್ಯಮಿಗಳಾದ ಸತೀಶ್ ಶೆಟ್ಟಿ, ಅಶ್ರಫ್ ಕರ್ನಿರೆ, ಆಸರೆ ವುಮೆನ್ ಫೌಂಡೇಶನ್ ಸ್ಥಾಪಕಾಧ್ಯಕ್ಷೆ ಸಬೀನ ಅಖ್ತರ್, ಅಬ್ದುಲ್ ಅಲಾ ಪುತ್ತಿಗೆ, ವಿಶ್ವಾಸ್ ಎಸ್ಟೇಟ್ ಪಾಲುದಾರ ಸುಲೈಮಾನ್ ಶೇಖ್ ಬೆಳುವಾಯಿ ಉಪಸ್ಥಿತರಿದ್ದರು.

ವಿಶ್ವಾಸ್ ಬಾವ ಬಿಲ್ಡರ್ ಪಾಲುದಾರ ಅಶ್ರಫ್ ಜಿ.ಬಾವ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News