×
Ad

ಪೊಲೀಸರನ್ನು ಕಂಡು ಕೋವಿ, ಜೀಪು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಬೇಟೆಗಾರರು

Update: 2016-08-27 17:45 IST

ಕಾಸರಗೋಡು, ಆ.27: ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಬೇಟೆಗಾರರು ಕೋವಿ, ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ಕುಂಬಳೆ ಸಮೀಪದ ಬೇಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿದಾಗ ಬೇಳದ ಕಜಳಂಕುಳ ಬಳಿ ಕಾಡುಪ್ರಾಣಿಗಳ ಬೇಟೆ ನಡೆಸುತ್ತಿದ್ದ ತಂಡವು ಪರಾರಿಯಾಗಿದೆ. ಸ್ಥಳದಿಂದ ಕೋವಿ, ಜೀಪು, ಕತ್ತಿ, ಕೋವಿಯ ಕವಚ ಮೊದಲಾದವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜೀಪಿನ ಆರ್ಸಿ ಮಾಲಕ ಬೇಡಡ್ಕದ ರವೀಂದ್ರನ್, ಕೋವಿಯ ಕವಚದಲ್ಲಿ ಇದ್ದ ಹೆಸರಿನ ಆಧಾರದಲ್ಲಿ ಕುಂಡಗುಯಿಯ ಅಶೋಕ್ ಮತ್ತು ಶಶಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News