ಉತ್ತರಪ್ರದೇಶ: ಮುಂದಿನ ತಿಂಗಳು ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಿಸಾನ್‌ಯಾತ್ರಾ
Update: 2016-08-28 00:13 IST
ಲಕ್ನೊ, ಆ.27: ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯಬೇಕೆಂಬ ಶತಪ್ರಯತ್ನದಲ್ಲಿ ತೊಡಗಿರುವ ಕಾಂಗ್ರೆಸ್ ರಾಜ್ಯದ ರೈತರಿಗಾಗಿ ಧ್ವನಿಯೆತ್ತಲು ಮುಂದೆ ಬಂದಿದೆ. ಮುಂದಿನ ತಿಂಗಳು ರಾಹುಲ್‌ಗಾಂಧಿ ನೇತೃತ್ವದಲ್ಲಿ ಉತ್ತರಪ್ರದೇಶದ ರೈತರಿಗಾಗಿ ಕಿಸಾನ್‌ಯಾತ್ರಾವನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ರಾಜಕೀಯದಲ್ಲಿ ತನ್ನ ವರ್ಚಸ್ಸನ್ನು ಮರಳಿ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಹಳೆಯ ರಾಜಕೀಯಪಕ್ಷ ಕಾಂಗ್ರೆಸ್ ಪಕ್ಷ ಈರೀತಿ ಯೋಜನಾಬದ್ಧವಾದ ಹೆಜ್ಜೆಗಳನ್ನು ಇಡುತ್ತಿದೆ.